ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ: ಕಂಗಾಲಾದ ಧ್ರುವಂತ್

Updated on: Dec 18, 2025 | 5:00 PM

ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಸೀಕ್ರೆಟ್​​ ರೂಮ್​​ನಲ್ಲಿ ಇದ್ದಾರೆ. ಅಲ್ಲಿಯೂ ಅವರಿಗೆ ಚಟುವಟಿಕೆಗಳನ್ನು ನೀಡಲಾಗಿದೆ. ಆದರೆ ಅನೇಕ ಸಂದರ್ಭಗಳಲ್ಲಿ ಅವರಿಬ್ಬರ ನಡುವೆ ಹೊಂದಾಣಿಕೆ ಆಗುತ್ತಿಲ್ಲ. ಹಾಗಾಗಿ ಪದೇ ಪದೇ ಜಗಳ ಆಡುತ್ತಿದ್ದಾರೆ. ಇಬ್ಬರ ಅಭಿಪ್ರಾಯಗಳು ಬೇರೆ ಬೇರೆ ಆಗಿವೆ. ಧ್ರುವಂತ್ ಮಾತುಗಳಿಂದ ರಕ್ಷಿತಾ ಕೋಪಗೊಂಡಿದ್ದಾರೆ.

ಸದ್ಯಕ್ಕೆ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ (Rakshitha Shetty) ಅವರು ಸೀಕ್ರೆಟ್​​ ರೂಮ್​​ನಲ್ಲಿ ಇದ್ದಾರೆ. ಅಲ್ಲಿ ಅವರಿಗೆ ಕೆಲವು ಚಟುವಟಿಕೆಗಳನ್ನು ನೀಡಲಾಗುತ್ತಿದೆ. ಇಬ್ಬರೂ ಚರ್ಚಿಸಿ ಒಮ್ಮತದ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಿಗ್ ಬಾಸ್ ಸೂಚಿಸುತ್ತಿದ್ದಾರೆ. ಆದರೆ ಅನೇಕ ಸಂದರ್ಭಗಳಲ್ಲಿ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ (Dhruvanth) ನಡುವೆ ಹೊಂದಾಣಿಕೆ ಆಗುತ್ತಿಲ್ಲ. ಹಾಗಾಗಿ ಅವರು ಪದೇ ಪದೇ ಜಗಳ ಆಡುತ್ತಿದ್ದಾರೆ. ಇಬ್ಬರ ಅಭಿಪ್ರಾಯಗಳು ಕೂಡ ಬೇರೆ ಬೇರೆ ಆಗಿವೆ. ಆದ್ದರಿಂದ ಕಿರಿಕ್ ಆಗುತ್ತಿದೆ. ಧ್ರುವಂತ್ ಆಡಿದ ಮಾತುಗಳಿಂದ ರಕ್ಷಿತಾ ಶೆಟ್ಟಿ ಅವರು ಕೋಪಗೊಂಡಿದ್ದಾರೆ. ಅಲ್ಲದೇ, ಅವರ ಕೋಪ ಮಿತಿ ಮೀರಿದೆ. ಧ್ರುವಂತ್ ಅವರ ಹಾಸಿಗೆಯನ್ನು ರಕ್ಷಿತಾ ಶೆಟ್ಟಿ ಕಿತ್ತು ಬಿಸಾಕಿದ್ದಾರೆ. ಡಿಸೆಂಬರ್ 18ರ ಸಂಚಿಕೆಯ ಪ್ರೋಮೋ ಇಲ್ಲಿದೆ. ‘ಜಿಯೋ ಹಾಟ್​ ಸ್ಟಾರ್’ ಒಟಿಟಿ ಮತ್ತು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪೂರ್ತಿ ಸಂಚಿಕೆ ವೀಕ್ಷಿಸಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.