AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಕಾಡ್ತಿದೆ ತಪ್ಪಿತಸ್ಥ ಭಾವನೆ?

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಕಾಡ್ತಿದೆ ತಪ್ಪಿತಸ್ಥ ಭಾವನೆ?

ರಾಜೇಶ್ ದುಗ್ಗುಮನೆ
|

Updated on:Dec 16, 2025 | 8:50 AM

Share

ಬಿಗ್ ಬಾಸ್ ಮನೆಯಲ್ಲಿ ಸೀಕ್ರೆಟ್ ರೂಂ ಟಾಸ್ಕ್ ಈ ವಾರ ಆರಂಭ ಆಗಿದೆ. ರಕ್ಷಿತಾ ಹಾಗೂ ಧ್ರುವಂತ್​ನ ಬಿಗ್ ಬಾಸ್​ನ ಸೀಕ್ರೆಟ್ ರೂಂನಲ್ಲಿ ಇರಿಸಲಾಗಿದೆ. ಈ ನಿರ್ಧಾರದ ಬಗ್ಗೆ ಬಿಗ್ ಬಾಸ್​ಗೆ ತಪ್ಪಿತಸ್ಥ ಭಾವನೆ ಕಾಡುತ್ತಿದೆ ಎಂದು ಧ್ರುವಂತ್ ಅವರು ಹೇಳಿದ್ದಾರೆ. ಆ ಬಗ್ಗೆ ಇಲ್ಲಿ ಇದೆ ವಿವರ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಈ ವಾರ ಸೀಕ್ರೆಟ್ ರೂಂ ಟಾಸ್ಕ್ ನಡೆಯುತ್ತಿದೆ. ರಕ್ಷಿತಾ ಹಾಗೂ ಧ್ರುವಂತ್ ಈ ರಹಸ್ಯ ಕೋಣೆ ಸೇರಿದ್ದಾರೆ. ಒಬ್ಬರು ಎಣ್ಣೆಯಾದರೆ ಮತ್ತೊಬ್ಬರು ನೀರು. ಹೀಗಾಗಿ, ಬೆರೆಯುವ ಮಾತೇ ಇಲ್ಲ. ಇಬ್ಬರ ಮಧ್ಯೆ ಕಿರಕ್​​ಗಳು ಆಗುತ್ತಲೇ ಇವೆ. ಈ ಮಧ್ಯೆ ಧ್ರುವಂತ್ ಅವರನ್ನು ರಕ್ಷಿತಾ ಟೀಕಿಸಿದ್ದಾರೆ. ‘ನಿಮ್ಮನ್ನು ಸೀಕ್ರೆಟ್​ ರೂಂಗೆ ಬಿಟ್ಟು ತಪ್ಪು ಮಾಡಿದೆ ಎಂದು ಬಿಗ್ ಬಾಸ್​ಗೂ ಅನಿಸುತ್ತಿದೆ’ ಎಂಬುದಾಗಿ ರಕ್ಷಿತಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Dec 16, 2025 08:20 AM

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More