ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಹೋದಲ್ಲೆಲ್ಲ ಜನಜಾತ್ರೆ: ಮುಗಿಬಿದ್ದ ಮದ್ದೂರು ಫ್ಯಾನ್ಸ್

Edited By:

Updated on: Jan 19, 2026 | 5:20 PM

ಗಿಲ್ಲಿ ನಟ ಬಿಗ್ ಬಾಸ್ ಟ್ರೋಫಿ ಗೆಲ್ಲಲಿ ಎಂದು ಕರ್ನಾಟಕದ ಜನರು ಬೆಂಬಲಿಸಿದ್ದರು. ಅದರಂತೆಯೇ ಆಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಆಗಿ ಗಿಲ್ಲಿ ನಟ ಹೊರಹೊಮ್ಮಿದ್ದಾರೆ. ಕಪ್ ಗೆದ್ದ ಬಳಿಕ ಅವರು ಮಂಡ್ಯ, ಮಳವಳ್ಳಿ, ಮದ್ದೂರಿಗೆ ಭೇಟಿ ನೀಡಿದ್ದಾರೆ.

ಗಿಲ್ಲಿ ನಟ (Gilli Nata) ಅವರು ಬಿಗ್ ಬಾಸ್ ಟ್ರೋಫಿ ಗೆಲ್ಲಬೇಕು ಎಂದು ಕರ್ನಾಟಕದ ಜನರು ಬೆಂಬಲಿಸಿದ್ದರು. ಅದರಂತೆಯೇ ಆಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಆಗಿ ಗಿಲ್ಲಿ ನಟ ಅವರು ಹೊರಹೊಮ್ಮಿದ್ದಾರೆ. ಕಪ್ ಗೆದ್ದ ಬಳಿಕ ಗಿಲ್ಲಿ ಅವರು ಮಂಡ್ಯ, ಮದ್ದೂರು (Maddur), ಮಳವಳ್ಳಿಗೆ ಭೇಟಿ ನೀಡಿದ್ದಾರೆ. ಗಿಲ್ಲಿ ನಟ ಹೋದಲ್ಲೆಲ್ಲ ಜನಜಾತ್ರೆ ಸೇರುತ್ತಿದೆ. ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ಜನರನ್ನು ನಿಯಂತ್ರಿಸುವುದೇ ಕಷ್ಟ ಆಗುತ್ತಿದೆ. ಅಷ್ಟರಮಟ್ಟಿಗೆ ಗಿಲ್ಲಿ ಬಗ್ಗೆ ಜನರಿಗೆ ಕ್ರೇಜ್ ಸೃಷ್ಟಿ ಆಗಿದೆ. ಬಿಗ್ ಬಾಸ್ ಫಿನಾಲೆಯಲ್ಲಿ ರಕ್ಷಿತಾ ಶೆಟ್ಟಿ ಅವರು ಮೊದಲ ರನ್ನರ್ ಅಪ್ ಆದರು. ಅಶ್ವಿನಿ ಗೌಡ ಅವರು 2ನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.