‘ಬಿಗ್ ಬಾಸ್​’ ವಿರುದ್ಧವೇ ಅಸಮಾಧಾನ ಹೊರಹಾಕಿದ ಸ್ಪರ್ಧಿಗಳು

Updated on: Sep 07, 2026 | 8:55 AM

‘ಬಿಗ್ ಬಾಸ್ ಕನ್ನಡ ಸೀಸನ್ 13’ ಅದ್ದೂರಿಯಾಗಿ ಚಾಲನೆ ಪಡೆದುಕೊಂಡಿದ್ದು, ಮೊದಲ ದಿನದ ಪ್ರೋಮೋ ಬಿಡುಗಡೆಯಾಗಿ ಭಾರಿ ಕುತೂಹಲ ಮೂಡಿಸಿದೆ. ಈ ಬಾರಿ ದೊಡ್ಮನೆಯ ಸೀಸನ್‌ಗೆ ವಿಮಾನದ ವಿಶಿಷ್ಟ ಥೀಮ್ ನೀಡಲಾಗಿದ್ದು, ಸ್ಪರ್ಧಿಗಳೆಲ್ಲರೂ ವಿಮಾನದ ಮಾದರಿಯ ಸೆಟ್‌ನಲ್ಲಿ ಪ್ರಯಾಣ ಬೆಳೆಸುವ ಮೂಲಕ ಮನೆಗೆ ಪ್ರವೇಶಿಸಿದ್ದಾರೆ. ಪ್ರೋಮೋದಲ್ಲಿ ಕಂಡುಬಂದ ಸಂಪೂರ್ಣ ವಿವರ ಇಲ್ಲಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭ ಆಗಿದೆ. ಸ್ಪರ್ಧಿಗಳು ಅತ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ವಿಮಾನ ಏರಿದ ಸ್ಪರ್ಧಿಗಳು ಕುಣಿದು ಕುಪ್ಪಳಿಸಿ ಸಂತೋಷ ವ್ಯಕ್ತಪಡಿಸಿದರು. ಆದರೆ, ರಾತ್ರಿಯಾಗುತ್ತಿದ್ದಂತೆ ವಿಮಾನದ ಮಾದರಿಯ ಸೀಟುಗಳಲ್ಲೇ ಮಲಗಬೇಕಾದ ಪರಿಸ್ಥಿತಿ ಬಂದಾಗ ಸ್ಪರ್ಧಿಗಳ ನಡುವೆ ಅಸಮಾಧಾನ ಮತ್ತು ಕಿರಿಕಿರಿ ಶುರುವಾಗಿದೆ. ‘ಹೇಗೆ ಮಲಗಿಕೊಳ್ಳುವುದು ಹೇಳಿ, ನಮಗೆ ಆಗಲ್ಲ’ ಎಂದು ಸ್ಪರ್ಧಿಗಳು ಅಳಲು ತೋಡಿಕೊಂಡಿದ್ದಾರೆ.

‘ಇನ್ನೊಬ್ಬರ ಬಗ್ಗೆ ಸ್ವಲ್ಪವೂ ಕೇರ್ ಮಾಡದೆ ಇರುವುದು ಕಷ್ಟವಾಗುತ್ತದೆ’ ಎಂದು ಕೆಲವರು ಬೇಸರ ವ್ಯಕ್ತಪಡಿಸಿದರೆ, ‘ನಮ್ಮನ್ನು ಕರೆಸಿ ಈ ರೀತಿ ಏತಕ್ಕೆ ರೋಸ್ತಿದ್ದೀರಾ ಎಂದು ಬಿಗ್ ಬಾಸ್‌ಗೆ ಕೇಳಬೇಕಿದೆ’ ಎಂದು ಅವಿನಾಶ್ ಸಿಟ್ಟಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More