‘ನನಗೆ ಜೋಡಿ ಇಲ್ಲ’: ಸುದೀಪ್ ಎದುರು ದೂರು ಹೇಳಿಕೊಂಡ ಬಿಗ್ ಬಾಸ್ ಪ್ರಶಾಂತ್
‘ಈ ಮನೆಯಲ್ಲಿ ಎಲ್ಲರಿಗೂ ಅವರದ್ದೇ ಆದಂತಹ ಜೋಡಿ ಇದೆ. ನನಗೆ ಇಲ್ಲಿ ಯಾರೂ ಇಲ್ಲ ಎಂಬ ನೋವು ಇದೆ’ ಎಂದು ಅವರು ಹೇಳಿದರು. ಅಲ್ಲದೇ, ಸೋನಿಕಾ ಅವರನ್ನು ತಮ್ಮ ಜೊತೆ ಜೋಡಿ ಆಗುವಂತೆ ಮನವಿ ಮಾಡಿಕೊಂಡಿದ್ದಾಗಿಯೂ ಅವರು ತಿಳಿಸಿದರು. ಇದಕ್ಕೆ ಸುದೀಪ್ ಅವರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಪ್ರಶಾಂತ್ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಆಟ ಆಡುತ್ತಿದ್ದಾರೆ. ಅಕ್ಟೋಬರ್ 18ರ ಭಾನುವಾರದ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ‘ಪ್ರಶಾಂತ್ ಅವರಿಂದ ನಮಗೆ ಒಂದು ಗಂಭೀರವಾದ ಮನವಿ ಬಂದಿದೆ’ ಎಂದು ಸುದೀಪ್ ಅವರು ಪ್ರಸ್ತಾಪ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಪ್ರಶಾಂತ್ ಅವರು ತಮ್ಮ ದೂರು ಏನು ಎಂಬುದನ್ನು ತಿಳಿಸಿದರು. ‘ಈ ಮನೆಯಲ್ಲಿ ಎಲ್ಲರಿಗೂ ಅವರದ್ದೇ ಆದಂತಹ ಜೋಡಿ ಇದೆ. ನನಗೆ ಇಲ್ಲಿ ಯಾರೂ ಇಲ್ಲ ಎಂಬ ನೋವು ಇದೆ’ ಎಂದು ಅವರು ಹೇಳಿದರು. ಅಲ್ಲದೇ, ಸೋನಿಕಾ ಅವರನ್ನು ತಮ್ಮ ಜೊತೆ ಜೋಡಿ ಆಗುವಂತೆ ಮನವಿ ಮಾಡಿಕೊಂಡಿದ್ದಾಗಿಯೂ ಅವರು ತಿಳಿಸಿದರು. ಇದಕ್ಕೆ ಸುದೀಪ್ ಅವರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರೋಮೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
