ಸ್ಪರ್ಧಿಗಳನ್ನು ಹೊರಗೆ ಕಳಿಸುವ ಪವರ್ ನನಗೂ ಇದೆ: ಸುದೀಪ್ ಎಚ್ಚರಿಕೆ
Bigg Boss Kannada 13: ಬಿಗ್ಬಾಸ್ ಮನೆಯಲ್ಲಿ ಯಾರಿಗೆ ಮತಗಳು ಕಡಿಮೆ ಬರುತ್ತವೆಯೋ ಅವರನ್ನು ಹೊರಗೆ ಕಳಿಸಲಾಗುತ್ತದೆ. ಇನ್ನು ಯಾವುದಾದರೂ ಸ್ಪರ್ಧಿಗಳು ಅತಿರೇಕದ ವರ್ತನೆ ಮಾಡಿದರೆ, ಅಂಥಹವರನ್ನು ಬಿಗ್ಬಬಾಸ್ ಹೊರಗೆ ಕಳಿಸುತ್ತಾರೆ. ಕಳೆದ ವಾರ ಮಾಡರ್ನ್ ಕವಿ ಮಂಜನನ್ನು ಬಿಗ್ಬಾಸ್ ಹೊರಗೆ ಕಳಿಸಿದ್ದಾರೆ. ಆದರೆ ಸುದೀಪ್ ಎಂದಿಗೂ ಸಹ ಯಾರನ್ನೂ ಹೊರಗೆ ಕಳಿಸಿಲ್ಲ. ಆ ಅಧಿಕಾರ ನನಗೆ ಇಲ್ಲ ಎಂದೇ ಸುದೀಪ್ ಅವರು ಹೇಳಿಕೊಂಡು ಬಂದಿದ್ದರು. ಆದರೆ ಈಗ ‘ಹೊರಗೆ ಕಳಿಸುವ ಅಧಿಕಾರ ನನಗೂ ಇದೆ’ ಎಂದಿದ್ದಾರೆ ಕಿಚ್ಚ.

ಮುಖ್ಯಾಂಶಗಳು
- ಶನಿವಾರದ ಎಪಿಸೋಡಿನಲ್ಲಿ ಕಿಚ್ಚನ ಕ್ಲಾಸ್
- ಗೇಮ್ ಅರ್ಥವೇ ಆಗಿಲ್ಲ ಎಂದ ಜಗ್ಗ ಮಮ್ಮಿ
- ಅರ್ಥ ಆಗಿಲ್ಲದರು ಮನೆ ಬಿಟ್ಟು ಹೊರಡಿ ಎಂದ ಕಿಚ್ಚ
ಬಿಗ್ಬಾಸ್ ಮನೆಯ ಸ್ಪರ್ಧಿಗಳನ್ನು ಹೊರಗೆ ಕಳಿಸುವ ಅಧಿಕಾರ ಮತ ಹಾಕುವ ಜನರಿಗೆ ಮತ್ತು ಬಿಗ್ಬಾಸ್ ಇಬ್ಬರಿಗೇ ಇರುವುದು. ಯಾರಿಗೆ ಮತಗಳು ಕಡಿಮೆ ಬರುತ್ತವೆಯೋ ಅವರನ್ನು ಹೊರಗೆ ಕಳಿಸಲಾಗುತ್ತದೆ. ಇನ್ನು ಯಾವುದಾದರೂ ಸ್ಪರ್ಧಿಗಳು ಅತಿರೇಕದ ವರ್ತನೆ ಮಾಡಿದರೆ, ಅಂಥಹವರನ್ನು ಬಿಗ್ಬಬಾಸ್ ಹೊರಗೆ ಕಳಿಸುತ್ತಾರೆ. ಕಳೆದ ವಾರ ಮಾಡರ್ನ್ ಕವಿ ಮಂಜನನ್ನು ಬಿಗ್ಬಾಸ್ ಹೊರಗೆ ಕಳಿಸಿದ್ದಾರೆ. ಆದರೆ ಸುದೀಪ್ ಎಂದಿಗೂ ಸಹ ಯಾರನ್ನೂ ಹೊರಗೆ ಕಳಿಸಿಲ್ಲ. ಆ ಅಧಿಕಾರ ನನಗೆ ಇಲ್ಲ ಎಂದೇ ಸುದೀಪ್ ಅವರು ಹೇಳಿಕೊಂಡು ಬಂದಿದ್ದರು. ಆದರೆ ಈಗ ‘ಹೊರಗೆ ಕಳಿಸುವ ಅಧಿಕಾರ ನನಗೂ ಇದೆ’ ಎಂದಿದ್ದಾರೆ ಕಿಚ್ಚ.
ಗೇಮನ್ನು, ಟಾಸ್ಕ್ನ ನಿಯಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ, ಇಡೀ ಟಾಸ್ಕ್ ಅನ್ನು ಹಾಳು ಮಾಡುತ್ತಿರುವ ಬಗ್ಗೆ, ಟಾಸ್ಕ್ಗಳನ್ನು ರದ್ದಾಗುವಂತೆ ಮಾಡುತ್ತಿರುವ ಬಗ್ಗೆ ಸುದೀಪ್ ಶನಿವಾರದ ಎಪಿಸೋಡಿನಲ್ಲಿ ಮಾತನಾಡಿದರು. ಈ ವೇಳೆ ಕೆಲ ಸ್ಪರ್ಧಿಗಳಿಗೆ ಪ್ರಶ್ನೆಗಳನ್ನು ಕೇಳಿ ಅವರ ಅಭಿಪ್ರಾಯವನ್ನೂ ಸಹ ಪಡೆದುಕೊಂಡರು. ಜಗ್ಗ ಮಮ್ಮಿಗೆ ಈ ಬಗ್ಗೆ ಪ್ರಶ್ನೆ ಕೇಳಿದಾಗ, ಪ್ರಶ್ನೆ ಅರ್ಥವಾಗದೆ ತನಗೆ ತೋಚಿದಂತೆ ಜಗ್ಗ ಮಮ್ಮಿ ಉತ್ತರ ನೀಡಿದರು. ಅದರ ಜೊತೆಗೆ ‘ನನಗೆ ಇನ್ನೂ ಗೇಮು ಅರ್ಥವಾಗಿಲ್ಲ’ ಎಂದರು. ಇದು ಸುದೀಪ್ ಅವರಿಗೆ ಸಿಟ್ಟು ತರಿಸಿತು.
ಸಿಟ್ಟಿನಿಂದಲೇ ಪ್ರತಿಕ್ರಿಯೆ ನೀಡಿದ ಸುದೀಪ್, ‘ಕೂಡಲೇ ಹೋಗಿ ಸೂಟ್ಕೇಸ್ ರೆಡಿ ಮಾಡಿಕೊಳ್ಳಿ, ಐದು ನಿಮಿಷದಲ್ಲಿ ನೀವು ಮನೆಯಿಂದ ಹೊರಗೆ ಬರಬೇಕು’ ಎಂದರು. ಇದು ಜಗ್ಗಮಮ್ಮಿಗೆ ಶಾಕ್ ನೀಡಿತು. ‘ಇಷ್ಟು ವಾರವಾಗಿದೆ ಆಟ ಶುರುವಾಗಿ. ಪ್ರತಿ ವಾರ ನಾನು ಬಂದು ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಆದರೂ ನಿಮಗೆ ಗೇಮ್ ಅರ್ಥ ಆಗಿಲ್ಲ ಎಂದಾದರೆ ಅಲ್ಲಿ ಇರಲೇ ಬೇಡಿ, ಈ ಕೂಡಲೇ ನೀವು ಅಲ್ಲಿಂದ ಹೊರಗೆ ಬನ್ನಿ, ಸೂಟ್ ಕೇಸ್ ರೆಡಿಕೊಳ್ಳಿ’ ಎಂದರು.
ಇದನ್ನೂ ಓದಿ:ಈ ಬಾರಿ ಬಿಗ್ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಆ ಬಳಿಕ ಸ್ಪರ್ಧಿಗಳನ್ನುದ್ದೇಶಿಸಿ ಮಾತನಾಡಿದ ಸುದೀಪ್, ‘ಯಾರಿಗೆ ಇನ್ನೂ ಗೇಮ್ ಅರ್ಥ ಆಗಿಲ್ಲವೊ ಅವರು ಈ ಕೂಡಲೇ ಮನೆಯಿಂದ ಹೊರಗೆ ಬಂದು ಬಿಡಿ, ನನಗೆ ಯಾವುದೇ ಬೇಸರ ಇಲ್ಲ. ಅಸಲಿಗೆ ಈ ಬಾರಿ ನನಗೇ ಇಬ್ಬರು ಮೂವರನ್ನು ಹೊರಗೆ ಕಳಿಸುವ ಆಸೆ ಇದೆ. ಹೊರಗೆ ಕಳಿಸುವ ಅಧಿಕಾರ ನನಗೂ ಇದೆ. ನಾನೂ ಸಹ ಗೇಟು ತೆರೆಯಬಲ್ಲೆ. ಅದಕ್ಕೆ ಕಳೆದ ವಾರ ಮಂಜನನ್ನು ಹೊರಗೆ ಕಳಿಸಿದಾಗಲೇ ಹೇಳಿದ್ದೆ, ನಾನಾಗಿದ್ದರೆ ಮಂಜನ ಜೊತೆಗೆ ಬೇರೆಯವರನ್ನೂ ಕಳಿಸುತ್ತಿದ್ದೆ ಎಂದು’ ಎಂದರು ಸುದೀಪ್.
ಸುದೀಪ್ ಹೇಳಿದಂತೆ ಜಗ್ಗ ಮಮ್ಮಿ ಸೂಟ್ಕೇಸ್ ರೆಡಿ ಮಾಡಿಕೊಂಡು ಬಂದರಾದರೂ ಸುದೀಪ್ ಅವರು, ಜಗ್ಗ ಮಮ್ಮಿಯನ್ನು ಹೊರಗೆ ಕಳಿಸಲಿಲ್ಲ. ಅಸಲಿಗೆ ಜಗ್ಗ ಮಮ್ಮಿ ಈ ಬಾರಿ ನಾಮಿನೇಷನ್ ನಲ್ಲಿ ಇದ್ದಾರೆ. ಅವರೊಟ್ಟಿಗೆ ಇನ್ನೂ ಕೆಲವು ಪ್ರಮುಖ ಸ್ಪರ್ಧಿಗಳೇ ಈ ಬಾರಿ ನಾಮಿನೇಟ್ ಆಗಿದ್ದಾರೆ. ಈ ವಾರ ಯಾರು ಹೊರಗೆ ಹೋಗುತ್ತಾರೆ ಎಂಬುದು ನಾಳೆ ಅಂದರೆ ಭಾನುವಾರದ ಎಪಿಸೋಡಿನಲ್ಲಿ ಗೊತ್ತಾಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




