ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 11ರ ಮತ್ತೊಂದು ವೀಕೆಂಡ್ ಎಪಿಸೋಡ್ಗೆ ಸುದೀಪ್ ಆಗಮಿಸಿದ್ದಾರೆ. ಈ ಬಾರಿ ಸುದೀಪ್ಗೆ ಮಾತನಾಡಲು ಸಾಕಷ್ಟು ವಿಷಯ ಇದೆ. ರೆಸಾರ್ಟ್ ಟಾಸ್ಕ್ನಲ್ಲಿ ಹಲವರು ನಿಯಮಗಳನ್ನು ಮುರಿದು ಆಟವಾಡಿದ್ದಾರೆ. ಭವ್ಯಾ ಅಂತೂ ಮೋಸದ ಆಟ ಆಡಿ ಟಾಸ್ಕ್ ಗೆದ್ದು ಕ್ಯಾಪ್ಟನ್ ಆಗಿದ್ದಾರೆ. ಸುದೀಪ್ ಯಾರ್ಯಾರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ ನೋಡಬೇಕಿದೆ.
ಮತ್ತೊಂದು ಶನಿವಾರ ಬಂದಿದೆ. ಮತ್ತೆ ಸುದೀಪ್ ಬಂದಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ತಪ್ಪು ಮಾಡಿದವರ ಮೇಲೆ ಮಾತಿನ ಚಾಟಿ ಬೀಸಲು ರೆಡಿಯಾಗಿದ್ದಾರೆ. ಈ ವಾರ ಸುದೀಪ್ ಅವರಿಗೆ ಮಾತನಾಡಲು ಸಾಕಷ್ಟು ಸರಕು ಇದೆ. ರೆಸಾರ್ಟ್ ಟಾಸ್ಕ್ನಲ್ಲಿ ಹಲವರು ನಿಯಮ ಮೀರಿ ಆಟ ಆಡಿದ್ದಾರೆ. ಅದರಲ್ಲೂ ಮನೆಯ ಕ್ಯಾಪ್ಟನ್ ಆಗಿರುವ ಭವ್ಯಾ, ನಿಯಮ ಮೀರಿ ಆಟವಾಡಿ ಮನೆಯ ಕ್ಯಾಪ್ಟನ್ ಆಗಿರುವುದು ಗಮನಕ್ಕೆ ಬಂದಿದೆ. ಕ್ಯಾಪ್ಟನ್ ಆಗಿ ನಾಮಿನೇಷನ್ನಿಂದ ಬಚಾವ್ ಸಹ ಆಗಿದ್ದಾರೆ. ಆದರೆ ಇಂದು ಸುದೀಪ್, ಭವ್ಯಾಗೆ ಸರಿಯಾಗಿ ಬುದ್ಧಿಕಲಿಸುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ