ಬಿಗ್ಬಾಸ್ ವೇದಿಕೆಯಲ್ಲಿ ಮತ್ತೆ ಹಳೆ ಖದರ್ ತೋರಿಸಿದ ಸುದೀಪ್
Bigg Boss Kannada Season 11: ತಾಯಿ ನಿಧನ ಹೊಂದಿದ ಕಾರಣ ಕಳೆದ ವಾರ ಸುದೀಪ್ ಶೋ ನಡೆಸಿಕೊಟ್ಟಿರಲಿಲ್ಲ. ಇಂದು ಬಿಗ್ಬಾಸ್ ಕನ್ನಡ ಸೀಸನ್ 11 ವೇದಿಕೆ ಸುದೀಪ್ ಮರಳಿದ್ದಾರೆ. ಮತ್ತೆ ತಮ್ಮ ಹಳೆಯ ಖದರ್ ಅನ್ನು ಸುದೀಪ್ ವೇದಿಕೆ ಮೇಲೆ ತೋರಿಸಿದ್ದಾರೆ.
ಒಂದು ವಾರದ ಗ್ಯಾಪ್ ಬಳಿಕ ಮತ್ತೆ ಬಿಗ್ಬಾಸ್ ವೇದಿಕೆಗೆ ಮರಳಿದ್ದಾರೆ ಕಿಚ್ಚ ಸುದೀಪ್. ಅಕ್ಟೋಬರ್ 19ರಂದು ಶನಿವಾರದ ಎಪಿಸೋಡ್ ನಡೆಸಿಕೊಟ್ಟಿದ್ದರು ಸುದೀಪ್, ಅಕ್ಟೋಬರ್ 20ರಂದು ಅವರ ತಾಯಿ ನಿಧನರಾದ ಕಾರಣ ಕಳೆದ ವಾರದ ಎಪಿಸೋಡ್ ಅನ್ನು ನಡೆಸಿಕೊಟ್ಟಿರಲಿಲ್ಲ. ಈ ವಾರವೂ ಸುದೀಪ್ ಬರುವುದಿಲ್ಲ ಎನ್ನಲಾಗಿತ್ತು, ಆದರೂ ಸಹ ಸುದೀಪ್ ಬಂದಿದ್ದಾರೆ. ಶೋನಲ್ಲಿ, ಸುದೀಪ್ರ ತಾಯಿಗೆ ಬಿಗ್ಬಾಸ್ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ಎದೆಯಲ್ಲಿ ನೋವಿದ್ದರೂ ಸಹ ಸುದೀಪ್ ತಮ್ಮ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಿದ್ದಾರೆ. ಬಿಗ್ಬಾಸ್ ವೇದಿಕೆ ಮೇಲೆ ಮತ್ತೆ ತಮ್ಮ ಹಳೆಯ ಖದರ್ ಅನ್ನು ತೋರಿಸಿದ್ದಾರೆ. ಕೆಲ ಸ್ಪರ್ಧಿಗಳಿಗೆ ಮಾತಿನ ಮಾಂಜಾ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 02, 2024 07:18 PM