ವಂಶವಾದದ ಬಗ್ಗೆ ಜನಾರ್ಧನರೆಡ್ಡಿ ಮಾಡುವ ಅರೋಪಗಳಲ್ಲಿ ಯಾವುದೇ ತಿರುಳಿಲ್ಲ: ಈ ತುಕಾರಾಂ
ವಾಲ್ಮೀಕಿ ಹಗರಣದ ಜತೆ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ, ಈಡಿ ಮತ್ತು ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿವೆ, ಈ ಏಜೆನ್ಸಿಗಳ ಅಧಿಕಾರಿಗಳು ಯಾವ ಕಾಗದ ಪತ್ರಗಳನ್ನು ಬೇಕಾದರೂ ಪರಿಶೀಲಿಸಬಹುದು, ತನಗೆ ಬಳ್ಳಾರಿಯನ್ನು ಅಭಿವೃದ್ಧಿ ಮಾಡುವ ಜವಾದ್ದಾರಿಯನ್ನು ಜನ ನೀಡಿದ್ದಾರೆ, ಎಂದು ತುಕಾರಾಂ ಹೇಳಿದರು.
ಬಳ್ಳಾರಿ: ಇದು ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಸಂಸದ ಈ ತುಕಾರಾಂ, ಸಂಡೂರು ಉಪ ಚುನಾವಣೆಯಲ್ಲಿ ತಮ್ಮ ಪತ್ನಿ ಮತ್ತು ಕಾಂಗ್ರೆಸ್ ಆಭ್ಯರ್ಥಿ ಅನ್ನಪೂರ್ಣ ಗೆಲ್ಲುವುದು ನಿಶ್ಚಿತ, ಜನಾರ್ಧನರೆಡ್ಡಿ ಅವರು ಸಂಡೂರಲ್ಲಿ ಮನೆ ಮಾಡಿದ್ದು ಮತ್ತು ವಂಶವಾದದ ಬಗ್ಗೆ ಮಾಡುತ್ತಿರುವ ಆರೋಪ ಮತದಾರರ ಮೇಲೆ ಯಾವ ಪ್ರಭಾವ ಬೀರಲಾರವು, ತಮಗೆ ರಾಜಕೀಯ ಸಂಸ್ಕಾರವಿದೆ ಮತ್ತು ಸಂಡೂರು ಮತದಾರ ಬಹಳ ಪ್ರಬುದ್ಧ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಾಲ್ಕು ಬಾರಿ ತುಕಾರಾಂ ಆಯ್ಕೆಯಾಗಿರುವ ಸಂಡೂರು ಕಾಂಗ್ರೆಸ್ ಪಕ್ಷದ ಭದ್ರಕೋಟೆ: ಬಿ ನಾಗೇಂದ್ರ
Follow Us
Latest Videos
