ಬಿಗ್ಬಾಸ್ ಕನ್ನಡ ಸೀಸನ್ 11 ಮುಗಿಯಲು ಕೆಲವೇ ದಿನಗಳು ಬಾಕಿ ಇದೆ. ಹನುಮಂತುಗೆ ಈಗಾಗೇ ಫಿನಾಲೆ ಟಿಕೆಟ್ ಸಿಕ್ಕಾಗಿದೆ. ಈ ಸೀಸನ್ನ ಕೊನೆಯ ಕ್ಯಾಪ್ಟನ್ ಆಗಿ ಅವರು ಆಯ್ಕೆ ಆಗಿದ್ದಾರೆ. ಇಂದು ಶನಿವಾರವಾಗಿದ್ದು ವಾರದ ಪಂಚಾಯಿತಿ ನಡೆಸಿಕೊಡಲು ಸುದೀಪ್ ಬಂದಿದ್ದಾರೆ. ಈ ವಾರ ಮನೆಯ ಸ್ಪರ್ಧಿಗಳು ಬಲು ಜಿದ್ದಾಜಿದ್ದಿನಿಂದ ಗೇಮ್ಗಳನ್ನು ಆಡಿದ್ದಾರೆ. ಒಬ್ಬರ ಮೇಲೊಬ್ಬರು ಬಿದ್ದು, ಹೊಡೆದಾಡಿಕೊಂಡು, ಬೈದಾಡಿಕೊಂಡು ಆಟ ಆಡಿದ್ದಾರೆ. ಟಾಸ್ಕ್ಗಳಲ್ಲಿ ಕಳ್ಳಾಟ ಆಡಿದವರಿಗೆ ಚಳಿ ಬಿಡಿಸಲಿದ್ದಾರೆ ಕಿಚ್ಚ ಸುದೀಪ್, ಅದರ ಝಲಕ್ ಒಮ್ಮೆ ನೋಡಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:09 pm, Sat, 11 January 25