‘ನಾನು ಎಲ್ಲೇ ಹೋದರೂ ಗುಂಡಿ ತೋಡಿಯೇ ಬರೋದು’; ಸಂಗೀತಾನ ಅನುಕರಿಸಿದ ಸಂತು

|

Updated on: Dec 04, 2023 | 8:38 AM

ತುಕಾಲಿ ಸಂತೋಷ್ ಅವರು ಹಾಸ್ಯದ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ಬಿಗ್ ಬಾಸ್ ರಿಲೀಸ್ ಮಾಡಿರೋ ಹೊಸ ಪ್ರೋಮೋ ಗಮನ ಸೆಳೆದಿದೆ. ಸಂಗೀತಾ ಅವರನ್ನು ಸಂತು ಇಮಿಟೇಟ್ ಮಾಡಿದ್ದಾರೆ.

ಬಿಗ್ ಬಾಸ್​ನಲ್ಲಿ (Bigg Boss) ಸೋಮವಾರ ಬಂತು ಎಂದರೆ ಕಿತ್ತಾಟ ಶುರುವಾಗುತ್ತದೆ. ಅಂದು ನಾಮಿನೇಷನ್ ಪ್ರಕ್ರಿಯೆ ನಡೆಯುತ್ತದೆ. ಓಪನ್ ನಾಮಿನೇಷನ್ ಇದ್ದರಂತೂ ಕೇಳುವ ಮಾತೇ ಇಲ್ಲ. ಆದರೆ, ಈ ಸೋಮವಾರದ ಎಪಿಸೋಡ್ ಸಖತ್ ಫನ್ ಇಂದ ಕೂಡಿರಲಿದೆ ಎಂಬುದಕ್ಕೆ ಬಿಗ್ ಬಾಸ್ ಪ್ರೋಮೋ ರಿಲೀಸ್ ಮಾಡಿದೆ. ಬಿಗ್ ಬಾಸ್ ಹೇಳಿದ ಸೂಚನೆಗಳನ್ನು ಎಲ್ಲರೂ ಅನುಸರಿಸಬೇಕು. ಸಂಗೀತಾ ಹಾಗೂ ಕಾರ್ತಿಕ್​ರಂತೆ ವರ್ತಿಸಿ ಎಂಬ ಆದೇಶ ಬಂತು. ವರ್ತೂರು ಸಂತೋಷ ಅವರು ಕಾರ್ತಿಕ್ ಆದರೆ, ಸಂಗೀತಾ ಪಾತ್ರವನ್ನು ತುಕಾಲಿ ಸಂತೋಷ್ ಮಾಡಿದರು. ‘ನಾನು ಎಲ್ಲೇ ಹೋದರೂ ಗುಂಡಿ ತೋಡಿಯೇ ಬರೋದು’ ಎಂದು ಸಂಗೀತಾನ ಇಮಿಟೇಟ್ ಮಾಡಿದ್ದಾರೆ ಸಂತೋಷ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ