ದೇವರಾಜ ಅರಸುರನ್ನು ಆದರ್ಶವಾಗಿಟ್ಟುಕೊಂಡಿರುವ ಸಿದ್ದರಾಮಯ್ಯ ಅವರಂತೆ ಕೆಲಸಗಳನ್ನೂ ಮಾಡಲಿ: ಕೆಎಸ್ ಈಶ್ವರಪ್ಪ

ಸಿದ್ದರಾಮಯ್ಯಗೆ ತಮ್ಮ ಸ್ಥಾನದ ಬಗ್ಗೆ ಅಭದ್ರತೆ ಕಾಡುತ್ತಿದ್ದರೆ ಅದು ಅವರ ಪಕ್ಷದವರೇ ಆಗಿರುವ ಡಿಕೆ ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ಅವರಿಂದ ಎಂದು ಈಶ್ವರಪ್ಪ ಹೇಳಿದರು. ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಭರದಲ್ಲಿ ರಾಜ್ಯದ ಖಜಾನೆ ಖಾಲಿಯಾಗಿರುವುದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಅಕ್ಷರಶಃ ನಿಂತುಹೋಗಿವೆ ಅಂತ ಅವರು ದೂರಿದರು.

ದೇವರಾಜ ಅರಸುರನ್ನು ಆದರ್ಶವಾಗಿಟ್ಟುಕೊಂಡಿರುವ ಸಿದ್ದರಾಮಯ್ಯ ಅವರಂತೆ ಕೆಲಸಗಳನ್ನೂ ಮಾಡಲಿ: ಕೆಎಸ್ ಈಶ್ವರಪ್ಪ
|

Updated on: Dec 04, 2023 | 11:06 AM

ಶಿವಮೊಗ್ಗ: ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಹಿರಿಯ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ (KS Eshwarappa) ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್ ಗಢ್ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಭಾರತದ ಜನ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಮಾಡಿರುವ ಕೆಲಸಗಳನ್ನು ಮೆಚ್ಚಿ ಅವರ ಮೇಲೆ ವಿಶ್ವಾಸವಿರಿಸಿರುವುದರ ಪ್ರತೀಕವಾಗಿದೆ ಎಂದು ಹೇಳಿದರು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (CM Siddaramaiah) ಸಂದೇಶವೊಂದನ್ನು ನೀಡಿದ ಅವರು, ಮುಂದಿನ ನಾಲ್ಕೂವರೆ ವರ್ಷಗಳ ಅವಧಿವರೆಗೆ ಅವರೇ ಸಿಎಂ ಆಗಿ ಮುಂದುವರಿಯಲಿ, ಅವರ ಕುರ್ಚಿ ಕಸಿಯುವ ಪ್ರಯತ್ನ ಬಿಜೆಪಿ ಖಂಡಿತ ಮಾಡಲ್ಲ, ಆದರೆ ಪ್ರತಿ ವಿಧಾನ ಮಂಡಲ ಆಧಿವೇಶನ ಆರಂಭವಾದಾಗ ದೇವರಾಜ ಅರಸು ಹೆಸರನ್ನು ನೆನೆಯುವ ಅವರು ಆ ಮಹಾನುಭಾವ ದಲಿತರಿಗೆ ಮತ್ತು ಹಿಂದುಳಿದ ವರ್ಗಗಳಿಗಾಗಿ ಮಾಡಿದ ಕೆಲಸಗಳನ್ನು ಜ್ಞಾಪಕ ಮಾಡಿಕೊಳ್ಳಲಿ ಎಂದು ಹೇಳಿದರು. ರಾಜ್ಯದೆಲ್ಲೆಡೆ ಈ ವರ್ಗಗಳ ಜನರಿಗೆ ವಸತಿ ಯೋಜನೆ ಸ್ಥಗಿತಗೊಂಡಿದೆ, ಸಿದ್ದರಾಮಯ್ಯ ಯೋಜನೆ ಪುನಾರಾರಂಭಿಸಲಿ ಎಂದು ಈಶ್ವರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us