ಭವ್ಯಾ ಮತ್ತು ಅವರ ಅಕ್ಕ ದಿವ್ಯಾ ಬಗ್ಗೆ ತ್ರಿವಿಕ್ರಮ್ ಹೇಳಿದ್ದು ಹೀಗೆ

|

Updated on: Jan 29, 2025 | 1:48 PM

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11 ಮುಗಿದಿದೆ. ಹನುಮಂತು ವಿನ್ನರ್ ಆಗಿದ್ದಾನೆ. ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಾನೆ. ಹೊರಗೆ ಬಂದ ಬಳಿಕ ಸ್ಪರ್ಧಿಗಳು ಮಾಧ್ಯಮಗಳ ಬಳಿ ಮಾತನಾಡುತ್ತಿದ್ದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಬಿಗ್​ಬಾಸ್ ರನ್ನರ್ ಅಪ್ ತ್ರಿವಿಕ್ರಮ್, ಭವ್ಯಾ ಬಗ್ಗೆ ಮಾತನಾಡಿದ್ದಾರೆ.

ಬಿಗ್​ಬಾಸ್ ಕನ್ನಡ ಸೀಸನ್ 11 ಮುಕ್ತಾಯಗೊಂಡಿದೆ. ಹನುಮಂತು ಬಿಗ್​ಬಾಸ್ ವಿಜೇತರಾಗಿದ್ದಾರೆ. ತ್ರಿವಿಕ್ರಮ್ ಮೊದಲ ರನ್ನರ್ ಅಪ್ ಆಗಿದ್ದಾರೆ. ತ್ರಿವಿಕ್ರಮ್ ಗೆಲ್ಲುತ್ತಾರೆ ಎಂದೇ ಎಲ್ಲರೂ ಎಣಿಸಿದ್ದರು ಆದರೆ ಅದು ಸಾಧ್ಯವಾಗಿಲ್ಲ. ಇನ್ನು ತ್ರಿವಿಕ್ರಮ್, ಬಿಗ್​ಬಾಸ್ ಮನೆಯಲ್ಲಿದ್ದಾಗ ಅವರ ಹಾಗೂ ಭವ್ಯಾ ನಡುವೆ ಪ್ರೀತಿ-ಪ್ರೇಮದ ವಿಷಯ ಬಲು ಚರ್ಚೆಯಾಗುತ್ತಿತ್ತು. ತ್ರಿವಿಕ್ರಮ್, ಭವ್ಯಾಗೆ ಪ್ರೊಪೋಸ್ ಮಾಡಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಸ್ವತಃ ಸುದೀಪ್ ಪ್ರಶ್ನೆ ಮಾಡಿದ್ದರು. ಆದರೆ ಸ್ಪರ್ಧಿಗಳ ಪೋಷಕರು ಮನೆಗೆ ಬಂದಾಗ ಎಲ್ಲ ಲೆಕ್ಕಾಚಾರವೂ ಬದಲಾಯ್ತು. ಭವ್ಯಾ ಅವರ ಅಕ್ಕ ದಿವ್ಯಾ ಮತ್ತು ಅವರ ತಾಯಿ ಬಂದು ಸಾಕಷ್ಟು ಬುದ್ಧಿವಾದವನ್ನು ಭವ್ಯಾಗೆ ಹೇಳಿದ್ದರು. ಇದೀಗ ತ್ರಿವಿಕ್ರಮ, ಭವ್ಯಾ ಮತ್ತು ದಿವ್ಯಾ ಬಗ್ಗೆ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 29, 2025 01:38 PM