ಬಾದಾಮಿ: ಪಿಡಿಒ ವಿರುದ್ಧ ಶಾಸಕ ಜೆಟಿ ಪಾಟೀಲ್ ಗರಂ, ಸಾರ್ವಜನಿಕರ ಎದುರೇ ಕ್ಲಾಸ್
ಜನರ ಅಳಲು ಕೇಳಿದ ಬೀಳಗಿ ಶಾಸಕ ಜೆಟಿ ಪಾಟೀಲ್ ಸಾರ್ವಜನಿಕರ ಎದುರೇ ಫಕೀರ್ ಬೂದಿಹಾಳ ಗ್ರಾಮದಲ್ಲಿ ಪಿಡಿಒ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜನರ ಪರ ಕೆಲಸ ಮಾಡದಿದ್ದರೆ ಅಮಾನತು ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ನಾಳೆಯೇ ಪಿಡಿಒಗಳ ಸಭೆ ಕರೆಯುವಂತೆಯೂ ಸೂಚಿಸಿದರು.
ಬೆಳಗಾವಿ, ಜನವರಿ 29: ಸಾರ್ವಜನಿಕರ ಸಮ್ಮುಖದಲ್ಲೇ ಗ್ರಾಮ ಪಂಚಾಯತ್ ಪಿಡಿಒ ರನ್ನು ಶಾಸಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಫಕೀರ್ ಬೂದಿಹಾಳ ಗ್ರಾಮದಲ್ಲಿ ಪಿಡಿಒ ಭಾರತಿ ಬದ್ನೂರ್ ವಿರುದ್ಧ ಬೀಳಗಿ ಶಾಸಕ ಜೆಟಿ ಪಾಟೀಲ್ ಗರಂ ಆದರು. ಸಿಇಒಗೆ ಕರೆ ಮಾಡಿ ನಾಳೆಯೇ ಪಿಡಿಒಗಳ ಸಭೆ ಮಾಡಲು ಸೂಚನೆ ನೀಡಿದರು.
ಪಿಡಿಒ ಕಾರ್ಯವೈಖರಿಗೆ ಬೇಸತ್ತು ಜನರು ಶಾಸಕ ಜೆ.ಟಿ.ಪಾಟೀಲ್ ಮುಂದೆ ಅಳಲು ತೋಡಿಕೊಂಡರು. ಇದೇ ವೇಳೆ ಗರಂ ಆದ ಶಾಸಕರು, ಪಿಡಿಒಗಳು ದೊಡ್ಡ ಭೂತ ಆಗಿದ್ದೀರಿ. ನರೇಗಾ, ಜನರ ಕೆಲಸ ಮಾಡದಿದ್ದರೆ ಅಮಾನತು ಮಾಡುತ್ತೇನೆ. ಕೆಲಸ ಮಾಡದಿದ್ದರೆ ಚಟ್ಟನೆ ಬೆಳಗಿಬಿಡ್ತೇನೆ ಮತ್ತೆ ಎಂದು ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos