Maha Kumbh 2025: ನಿರೀಕ್ಷೆಗೂ ಮೀರಿದ ಜನ ಮೇಳದಲ್ಲಿ ಭಾಗಿಯಾಗಿರುವ ಕಾರಣ ಕಾಲ್ತುಳಿತದ ಘಟನೆ ಸಂಭವಿಸಿದೆ: ಸಿಟಿ ರವಿ
Maha Kumbh 2025: ಮಹಾಕುಂಭ ಮೇಳದಲ್ಲಿ ಕಾಲ್ತುಳಿತಕ್ಕೆ ಒಳಗಾದವರಿಗೆ ಸಿಟಿ ರವಿ ಅನುಕಂಪ ಸೂಚಿಸಲು ಮುಂದಾಗುತ್ತಾರೆ, ಆದರೆ, ಎಷ್ಟು ಜನ ಆಸ್ಪತ್ರೆ ಸೇರಿದ್ದಾರೆಂಬ ಬಗ್ಗೆ ನಿಖರವಾದ ಮಾಹಿತಿಯಿಲ್ಲದ ಕಾರಣ ಮಾಧ್ಯಮದವರೇ ಬೇಡ ಅನ್ನುತ್ತಾರೆ. ಇವತ್ತು ಕುಂಭಮೇಳದಲ್ಲಿ 5ಕೋಟಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇತ್ತು ಆದರೆ 10ಕೋಟಿಯಷ್ಟು ಭಕ್ತರು ಅಲ್ಲಿ ಸೇರಿದ್ದಾರೆ.
ಮೈಸೂರು: ಮಹಾಕುಂಭ ಮೇಳದಲ್ಲಿ ಉತ್ತರ ಪ್ರದೇಶ ಸರ್ಕಾರ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಿದ್ದರೂ ಕಾಲ್ತುಳಿತ ಸಂಭವಿಸಿ ಭಕ್ತಾದಿಗಳು ಗಾಯಗೊಂಡು ಆಸ್ಪತ್ರೆ ಸೇರಿರುವುದು ದುರದೃಷ್ಟಕರ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಹೇಳಿದರು. ಬಿಜೆಪಿ ನಾಯಕ ಈ ಬಾರಿಯ ಮಹಾಕುಂಭ ಮೇಳದಲ್ಲಿ ಭಾಗಿಯಾಗಿ ಪುಣ್ಯಸ್ನಾನ ಮಾಡಿದ್ದಾರೆ, ಜನೆವರಿ 18, 19 ಮತ್ತು 20 ರಂದು ಅವರು ಪ್ರಯಾಗ್ರಾಜ್ನಲ್ಲಿದ್ದ ಮಾಹಿತಿಯನ್ನು ನೀಡುತ್ತಾರೆ. ನಿರೀಕ್ಷೆಗೂ ಮೀರಿ ಜನ ಕುಂಭಮೇಳದಲ್ಲಿ ಭಾಗಿಯಾಗಿರುವ ಕಾರಣ ಕಾಲ್ತುಳಿತದ ಘಟನೆ ಸಂಭವಿಸಿದೆ ಎಂದು ರವಿ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Mahakumbh 2025: ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ಮೊದಲು ಈ ವಿಷ್ಯ ತಿಳಿದಿರಲಿ
Latest Videos