ಕೋಚ್ಗಳ ಸಂಖ್ಯೆ ಕಡಿಮೆ ಮಾಡಿದ್ದಕ್ಕೆ ಕೆಜಿಎಫ್-ಬೆಂಗಳೂರು ರೈಲನ್ನು ಬಂಗಾರಪೇಟೆಯಲ್ಲಿ ತಡೆದು ಪ್ರತಿಭಟನೆ
ಕೋಲಾರ, ಕೆಜಿಎಫ್ ಮತ್ತು ಬಂಗಾರಪೇಟೆಯಿಂದ ಪ್ರತಿನಿತ್ಯ ಸಾವಿರಾರು ಜನ ಬೆಂಗಳೂರುಗೆ ಬರುತ್ತಾರೆ. ಆಫೀಸು. ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರು, ಕೂಲಿಕಾರ್ಮಿಕರು ಮೊದಲಾದವರಿಗೆಲ್ಲ ಪ್ಯಾಸೆಂಜರ್ ರೈಲೇ ಸಾರಿಗೆ ಸಾಧನ. ಹಾಗಾಗಿ ಕೆಜಿಎಫ್ ನಿಂದ ಬೆಂಗಳೂರುಗೆ ಬರುವ ಟ್ರೈನುಗಳ ಕೋಚ್ ಸಂಖ್ಯೆ ಕಡಿಮೆ ಮಾಡಿದರೆ ನಿತ್ಯ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ.
ಕೋಲಾರ: ರಾಸ್ತಾ ರೋಕೋ, ರೇಲ್ ರೋಕೋ ಪ್ರತಿಭಟನೆಯ ಹಳೆಯ ವಿಧಾನಗಳು. ಜಿಲ್ಲೆಯ ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ಇಂದು ಕೆಜಿಎಫ್ನಿಂದ ಬೆಂಗಳೂರುಗೆ ಹೊರಟಿದ್ದ ಪ್ಯಾಸೆಂಜರ್ ರೈಲನ್ನು ತಡೆದು ಪ್ರಯಾಣಿಕರು ಪ್ರತಿಭಟನೆ ನಡೆಸಿದರು. ನಮ್ಮ ಕೋಲಾರ ಪ್ರತಿನಿಧಿ ನೀಡುವ ಮಾಹಿತಿ ಪ್ರಕಾರ ಬೆಂಗಳೂರುಗೆ ತೆರಳುವ ಈ ರೈಲಿಗೆ ಕೋಚ್ಗಳ ಸಂಖ್ಯೆಯನ್ನು ಕಡಿಮೆ ಮಾಡಿರುವುದಕ್ಕೆ ರೊಚ್ಚಿಗೆದ್ದ ಪ್ರಯಾಣಿಕರು ತಮ್ಮ ಕೋಪ ಮತ್ತು ಅಸಮಾಧಾನವನ್ನು ರೈಲನ್ನು ತಡೆಯುವ ಪ್ರದರ್ಶಿದರು. ರೇಲ್ವೇ ಅಧಿಕಾರಿಗಳು ಮತ್ತು ರೇಲ್ವೇ ಪ್ರೊಟೆಕ್ಷನ್ ಸಿಬ್ಬಂದಿಯೊಂದಿಗೆ ಜನ ವಾಗ್ವಾದಕ್ಕಿಳಿದಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಎಲ್ ಅಂಡ್ ಟಿ ಮುಖ್ಯಸ್ಥರ 90 ಗಂಟೆ ಕೆಲಸದ ಹೇಳಿಕೆ; ವಾಟಾಳ್ ನಾಗರಾಜ್ ಪ್ರತಿಭಟನೆ
Latest Videos