ಆಟದಲ್ಲಿ, ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ನಟ ತ್ರಿವಿಕ್ರಮ್ ಅವರೇ ಬಿಗ್ ಬಾಸ್ ಟ್ರೋಫಿ ಗೆಲ್ಲುತ್ತಾರೆ ಎಂಬುದು ಬಹುತೇಕರ ಅಭಿಪ್ರಾಯ. ಬಿಗ್ ಬಾಸ್ ಕಡೆಯಿಂದಲೂ ಈ ಸೂಚನೆ ಸಿಕ್ಕಿದೆ. ಜನವರಿ 23ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದ್ದು, ಇದರಲ್ಲಿ ತ್ರಿವಿಕ್ರಮ್ ಅವರನ್ನು ಗುಣಗಾನ ಮಾಡುವ ಸಾಲುಗಳು ಇವೆ.
ಬಿಗ್ ಬಾಸ್ ಮನೆಗೆ ಅಭಿಮಾನಿಗಳು ಬಂದಿದ್ದಾರೆ. ಈ ವೇಳೆ ಫೈನಲಿಸ್ಟ್ಗಳ ಗುಣಗಾನ ಮಾಡಲಾಗಿದೆ. ‘ಈ ಮನೆಯಲ್ಲಿ ಸರಳತೆಗೆ ಮತ್ತೊಂದು ಹೆಸರೇ ಮೋಕ್ಷಿತಾ’ ಎಂದು ಬಿಗ್ ಬಾಸ್ ಹೇಳಿದ್ದಾರೆ. ‘ಈ ವ್ಯಕ್ತಿತ್ವದ ಆಟದಲ್ಲಿ ವ್ಯಕ್ತಿಯಾಗಿ ಉತ್ತಮ ತ್ರಿವಿಕ್ರಮ. ಆಟ ಆಡೋದ್ರಲ್ಲಿ ಉತ್ತಮ, ಉತ್ತಮೋತ್ತಮ ತ್ರಿವಿಕ್ರಮ’ ಎಂದು ಹೇಳಲಾಗಿದೆ. ಆ ಮೂಲಕ ಗೆಲುವಿನ ಸುಳಿವನ್ನು ನೀಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.