ಮಂಗಳೂರು ಕಾರಾಗೃಹಕ್ಕೆ ಗಾಂಜಾ ಸಪ್ಲೈ ಹೇಗೆ ಆಗುತ್ತಿದೆ ಗೊತ್ತಾ? ವಿಡಿಯೋ ನೋಡಿ
ನೋಡ್ರಿ.. ಸರಿಯಾಗಿ ನೋಡ್ರಿ.. ಹೆಚ್ಚು ಕಡಿಮೆ 20 ಅಡಿ ಎತ್ತರದ ಕಾಪೌಂಡ್ ಒಳಗೆ ಈ ಭೂಪ ಹೇಗೆ ಪೊಟ್ಟಣಗಳನ್ನ ಎಸೆಯುತ್ತಿದ್ದಾನೆ ನೋಡ್ರಿ. ಅಷ್ಟಕ್ಕೂ ಇಲ್ಲಿ ಎಸೆಯುತ್ತಿರೋದು ಕಸವಲ್ಲ.. ಖಾಲಿ ಕವರ್ ಅಲ್ವೇ ಅಲ್ಲ.. ಈ ಕವರ್‌ನಲ್ಲಿ ಏನಿದ್ಯೋ ಏನೋ.. ಆದ್ರೆ, ಗಾಂಜಾ ಎಸೆದಿರೋ ಆರೋಪ ಕೇಳಿಬಂದಿದೆ. ಯಾಕಂದ್ರೆ, ಇದು ಮಂಗಳೂರು ಜೈಲಿನ ಕಾಂಪೌಂಡ್.
ಮಂಗಳೂರು, (ಫೆಬ್ರವರಿ 24): ಇದು ಮಂಗಳೂರಿನ ಜೈಲ್ ರಸ್ತೆ.. ರಸ್ತೆ ಪಕ್ಕಕ್ಕೆ ಅಂಟಿಕೊಂಡತಿರೋ ಈ ಬೃಹತ್ ಕಾಂಪೌಂಡ್ ಮಂಗಳೂರು ಜೈಲಿನ ಗೋಡೆ.. ಜೈಲಿನಲ್ಲಿರೋ ಆರೋಪಿ, ಅಪರಾಧಿಗಳಿಗೆ ಹೊರಗಿನ ಸಂಪರ್ಕ ಇರಬಾರದು ಅಂತಾ 20 ಅಡಿ ಗೋಡೆ ಕಟ್ಟಿಸಿದ್ರೂ, ಖತರ್ನಾಕ್‌ಗಳು ರಂಗೋಲಿ ಕೆಳಗೆ ತೂರಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನದಲ್ಲಿ ಬಂದು ಪ್ಲಾಸ್ಟಿಕ್ ಕವರ್‌ನಲ್ಲಿ ಕಟ್ಟಿದ್ದ ಪೊಟ್ಟಣವನ್ನ ಜೈಲಿನ ಒಳಗೆ ಎರಡು ಬಾರಿ ಎಸೆದಿದ್ದಾರೆ. ಈ ಖತರ್ನಾಕ್‌ಗಳು ಕವರ್ ಎಸೆಯುವ ದೃಶ್ಯ ಮಾಜಿ ಮೇಯರ್ ಕವಿತ ಸನಿಲ್ ಅವರ ಕಾರಿನ ಕ್ಯಾಮರಾದಲ್ಲಿ ಸೆರೆಯಾಗಿದೆ. ದ್ವಿಚಕ್ರ ವಾಹನ ಸವಾರರನ್ನ ಕವಿತ ಚೇಸ್ ಮಾಡಿದ್ರೂ, ಬೈಕ್ ಸವಾರರು ಅಡ್ಡರಸ್ತೆಯಲ್ಲಿ ಪರಾರಿಯಾಗಿದ್ದಾರೆ.
ತಮ್ಮ ಕಾರಿನಲ್ಲಿ ಸೆರೆಯಾದ ಖತರ್ನಾಕ್‌ಗಳ ಕೃತ್ಯವನ್ನ ಕವಿತಾ ಜೈಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಪ್ಲಾಸ್ಟಿಕ್ ಕವರ್ ಬಿಸಾಡಿರೋದು ನಿಜ.. ಪತ್ತೆಯಾಗಿದೆ ಅನ್ನೋದನ್ನ ಒಪ್ಪಿಕೊಂಡ ಜೈಲಧಿಕಾರಿ, ಸಿಗರೇಟ್ ಮತ್ತು ಟೀ ಪೌಡರ್ ಇತ್ತು ಅಂತಾ ಹಾರಿಕೆ ಉತ್ತರ ನೀಡಿದ್ದಾರೆ. ಇನ್ನೂ ಪರಿಶೀಲನೆ ಮಾಡ್ತಿದ್ದೀವಿ ಅಂತಾ ಜಾರಿಕೊಳ್ತಿದ್ದಾರೆ. ಹೊರಗಿನಿಂದ ಎಸೆದ ಪ್ಲಾಸ್ಟಿಕ್ ಕವರ್‌ನ ಪೊಟ್ಟಣ ಸಿಕ್ಕಿದೆ ಅಂತಾ ಜೈಲಧಿಕಾರಿ ಒಪ್ಪಿಕೊಂಡ್ರು, ಪೊಟ್ಟಣದಲ್ಲಿ ಏನಿದೆ ಅನ್ನೋದನ್ನ ಬಹಿರಂಗಪಡಿಸ್ತಿಲ್ಲ. ಆದ್ರೆ, ಇದು ಗಾಂಜಾ, ಮಾದಕ ವಸ್ತು ಇರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಜೈಲಿನ ಒಳಗೆ ಎಸೆದ ಕವರ್‌ನಲ್ಲಿ ಗಾಂಜಾ ಇದ್ಯೋ? ಏನಿದ್ಯೋ ಆದ್ರೆ, ರಾಜ್ಯದ ಎಲ್ಲಾ ಜೈಲುಗಳಲ್ಲಿ ಎಗ್ಗಿಲ್ಲದೇ ದಂಧೆ ನಡೆಯುತ್ತಿದೆ ಎನ್ನುವುದಂತೂ ಸತ್ಯ. ದುಡ್ಡಿದ್ರೆ ಜೈಲು ದುನಿಯಾ ಅನ್ನೋದು ಮತ್ತೊಮ್ಮೆ ಬಯಲಾಗಿದೆ.