ಪ್ರಧಾನಿ ಮೋದಿಗೆ ಅವರಿಷ್ಟದ ಮಖಾನದಿಂದ ಮಾಡಿದ ಹಾರ ಹಾಕಿ ಸನ್ಮಾನ
ಈ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರದ ಭಾಗಲ್ಪುರದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮಖಾನಾ ಒಂದು ಸೂಪರ್‌ಫುಡ್ ಮತ್ತು ದೇಶಾದ್ಯಂತ ಜನರಿಗೆ ಉಪಾಹಾರದ ಪ್ರಮುಖ ಭಾಗವಾಗಿದೆ ಎಂದು ಹೇಳಿದರು.ದೇಶಾದ್ಯಂತ ಜನರಿಗೆ ಉಪಾಹಾರದ ಪ್ರಮುಖ ಭಾಗವೆಂದರೆ ಮಖಾನಾ ಎಂದು ಹೇಳಿದರು. ಭಾಷಣಕ್ಕೂ ಮುನ್ನ ಪ್ರಧಾನಿಯವರಿಗೆ ಮಖಾನದಿಂದ ಮಾಡಿದ ಹಾರವನ್ನು ಹಾಕಿ ಸನ್ಮಾನಿಸಲಾಯಿತು. "ಇಂದು ದೇಶದ ನಗರಗಳಲ್ಲಿ ಮಖಾನಾ ಉಪಾಹಾರದ ಪ್ರಮುಖ ಭಾಗವಾಗಿದೆ. 365 ದಿನಗಳಲ್ಲಿ ನಾನು 300 ದಿನಗಳು ಮಖಾನಾವನ್ನು ತಿನ್ನುತ್ತೇನೆ. ಇದು ಸೂಪರ್‌ಫುಡ್" ಎಂದು ಅವರು ರ್ಯಾಲಿಯಲ್ಲಿ ಹೇಳಿದರು.
ಭಾಗಲ್ಪುರ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್)ನ 19ನೇ ಕಂತನ್ನು ಬಿಡುಗಡೆ ಮಾಡಲು ಬಿಹಾರದ ಭಾಗಲ್ಪುರಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬಿಹಾರದ ಬಿಜೆಪಿ ನಾಯಕರು ‘ಮಖಾನ’ದಿಂದ ಮಾಡಿದ ಬೃಹತ್ ಹಾರವನ್ನು ಹಾಕಿ ಸನ್ಮಾನಿಸಿದರು.ಪ್ರತಿದಿನವೂ ಮಖಾನವನ್ನು ತಿನ್ನುವ ಪ್ರಧಾನ ಮೋದಿ ಮಖಾನವನ್ನು ಸೂಪರ್ ಫುಡ್ ಎಂದು ಕರೆದಿದ್ದಾರೆ. ವರ್ಷದಲ್ಲಿ 300 ದಿನಗಳು ಅವರು ಮಖಾನವನ್ನು ತಿನ್ನುತ್ತಾರೆ.ಈ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರದ ಭಾಗಲ್ಪುರದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅದರ ಆರೋಗ್ಯ ಪ್ರಯೋಜನಗಳಿಂದಾಗಿ ನಾನು ಪ್ರತಿದಿನ ಮಖಾನವನ್ನು ಸೇವಿಸುತ್ತೇನೆ ಎಂದು ಹೇಳಿದ್ದಾರೆ ಮತ್ತು ಅದನ್ನು ಜಾಗತಿಕ ಮಟ್ಟದಲ್ಲಿ ಉತ್ಪಾದಿಸಬೇಕು ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ