Video: ಮದ್ಯದ ಅಮಲಿನಲ್ಲಿ ಬಸ್ ಚಾಲಕನಿಗೆ ಮನಬಂದಂತೆ ಥಳಿಸಿದ ಯುವಕರು; ವಿಡಿಯೋ ವೈರಲ್​​

Video: ಮದ್ಯದ ಅಮಲಿನಲ್ಲಿ ಬಸ್ ಚಾಲಕನಿಗೆ ಮನಬಂದಂತೆ ಥಳಿಸಿದ ಯುವಕರು; ವಿಡಿಯೋ ವೈರಲ್​​

ಅಕ್ಷತಾ ವರ್ಕಾಡಿ
|

Updated on: Aug 02, 2024 | 5:54 PM

ಮದ್ಯದ ಅಮಲಿನಲ್ಲಿದ್ದ ಮೂವರು ಯುವಕರು ನಡು ರಸ್ತೆಯಲ್ಲೇ ಬಸ್​​ ತಡೆದು ನಿಲ್ಲಿಸಿ ಬಸ್ ಚಾಲಕನಿಗೆ ಮನಬಂದಂತೆ ಥಳಿಸಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್​​ ಆಗಿದೆ. ವಿಡಿಯೋ ಇಲ್ಲಿದೆ ನೋಡಿ.

ಹೈದರಾಬಾದ್‌: ನಡು ರಸ್ತೆಯಲ್ಲೇ ಬಸ್​​ ತಡೆದು ನಿಲ್ಲಿಸಿ ಯುವಕರಿಬ್ಬರು ಬಸ್ ಚಾಲಕನಿಗೆ ಮನಬಂದಂತೆ ಥಳಿಸಿರುವ ಘಟನೆ ಹೈದರಾಬಾದ್‌ನ ಎಂಜೆ ಮಾರುಕಟ್ಟೆ ಬಳಿ ನಡೆದಿದೆ. ಆರ್‌ಟಿಸಿ ಚಾಲಕ ಲಕ್ಷ್ಮಣ್ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಆರ್‌ಟಿಸಿ ಚಾಲಕ ಮತ್ತು ಕಂಡಕ್ಟರ್ ದೂರಿನ ಮೇರೆಗೆ ಬೇಗಂಬಜಾರ್ ಪೊಲೀಸ್​​​ ಠಾಣೆಯಲ್ಲಿ ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರು ಯುವಕರನ್ನು ವಶಕ್ಕೆ ಪಡೆಯಲಾಗಿದೆ.

ಎಂಜಿಬಿಎಸ್‌ನಿಂದ ಅಮೀರ್ ಪೇಟ್ ಹೋಗುತ್ತಿದ್ದ ಬಸ್‌ನಲ್ಲಿ ಈ ಘಟನೆ ನಡೆದಿದೆ. ಎಂ.ಜೆ.ಮಾರುಕಟ್ಟೆಯಲ್ಲಿ ಬಸ್ ಹಾದು ಹೋಗುತ್ತಿದ್ದಂತೆ ಬೈಕ್​ನಲ್ಲಿ ಬಂದ ಮೂವರು ಯುವಕರು ಬಸ್ ಗೆ ಅಡ್ಡಲಾಗಿ ಬಂದು ಬಸ್ ನಿಲ್ಲಿಸಿದ್ದಾರೆ. ಬಸ್ ಚಾಲಕ ಲಕ್ಷ್ಮಣ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ತಡೆಯಲು ಬಂದ ಕಂಡಕ್ಟರ್ ಅಂಜಮ್ಮ ಅವರನ್ನು ತಳ್ಳಿದ್ದಾರೆ. ಪೊಲೀಸರು ಮೂವರು ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದು, ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ. ಈ ಮೂವರು ಯುವಕರು ಮದ್ಯದ ಅಮಲಿನಲ್ಲಿದ್ದರು ಎಂದು ಬೇಗಂ ಬಜಾರ್ ಸಿಐ ತಿಳಿಸಿದ್ದಾರೆ.

ಇದನ್ನೂ ಓದಿ: ಆಟವಾಡುತ್ತಿದ್ದಾಗ ಮೈ ಮೇಲೆ ಬಿದ್ದ ಕಬ್ಬಿಣದ ಗೇಟ್, ಮಗು ಸ್ಥಳದಲ್ಲೇ ಸಾವು; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ