ರಸ್ತೆಯಲ್ಲೇ ಮಹಿಳಾ ಕಾನ್‌ಸ್ಟೆಬಲ್ ಕೆನ್ನೆಗೆ ಹೊಡೆದು, ಚುಂಬಿಸಿದ ಬೈಕ್ ಸವಾರ
ಉತ್ತರಪ್ರದೇಶದ ಮೊರಾದಾಬಾದ್‌ನ ರಸ್ತೆಯಲ್ಲಿ ಸಾರ್ವಜನಿಕರ ಎದುರಲ್ಲೇ ಲೇಡಿ ಕಾನ್‌ಸ್ಟೆಬಲ್ ಅನ್ನು ನಿಲ್ಲಿಸಿ, ಬೈಕ್ ಸವಾರನೊಬ್ಬ ಕಪಾಳಮೋಕ್ಷ ಮಾಡಿ ಒದ್ದಿದ್ದಾನೆ. ಬಳಿಕ ಬಲವಂತವಾಗಿ ಆಕೆಗೆ ಚುಂಬಿಸಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.
ಮೊರಾದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್‌ನ ರಸ್ತೆಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳಾ ಕಾನ್ಸ್‌ಟೇಬಲ್ ಮೇಲೆ ಹಗಲು ಹೊತ್ತಿನಲ್ಲಿಯೇ ಬೈಕ್ನಲ್ಲಿ ಬಂದ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ. ಈ ಘಟನೆಯು ಜನರನ್ನು ಬೆಚ್ಚಿಬೀಳಿಸಿದೆ. ಇದು ಆ ಪ್ರದೇಶದ ಮಹಿಳೆಯ ಸುರಕ್ಷತೆಯ ಬಗ್ಗೆ ಪ್ರಶ್ನಿಸುವಂತೆ ಮಾಡಿದೆ. ಈ ವೀಡಿಯೊದಲ್ಲಿ ಬೈಕ್ ಸವಾರನೊಬ್ಬ ಪೊಲೀಸರ ಬಳಿಗೆ ಬರುವುದು ಮತ್ತು ಅವಳೊಂದಿಗೆ ಅನುಚಿತವಾಗಿ ವರ್ತಿಸುವುದನ್ನು ನೋಡಬಹುದು. ಆಕೆ ಯೂನಿಫಾರಂ ಧರಿಸಿರದ ಕಾರಣ ಆತನಿಗೆ ಆಕೆ ಕಾನ್‌ಸ್ಟೆಬಲ್ ಎಂಬುದು ಗೊತ್ತಾಗಿಲ್ಲ. ಆತ ಅವಳನ್ನು ಬಲವಂತವಾಗಿ ಹಿಡಿದುಕೊಂಡು, ಸಾರ್ವಜನಿಕವಾಗಿ ಅವಳನ್ನು ಚುಂಬಿಸಿದ್ದಾನೆ. ಆತನಿಂದ ಬಿಡಿಸಿಕೊಳ್ಳಲಾಗದೆ ಆಕೆ ಒದ್ದಾಡಿದ್ದಾಳೆ. ಸುತ್ತಲೂ ನಿಂತಿದ್ದ ಜನ ಆತನನ್ನು ಹಿಡಿದು ಹೊಡೆಯಲು ಹೋಗಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ