ಟಿವಿ9 ಹಿರಿಯ ನಿರೂಪಕ ರಂಗನಾಥ್ ಭಾರದ್ವಾಜ್ಗೆ ಬಿಲ್ವ ಪ್ರಶಸ್ತಿ
ಉತ್ತರ ಕನ್ನಡ ಅಥವಾ ಸಹ್ಯಾದ್ರಿ ಪರಿಚಯ ಮಾಡಿಸ್ತಾ ತಮ್ಮ ಧ್ವನಿಯ ಮೂಲಕ ಪ್ರಾಮಾಣಿಕ ಸೇವೆ ಸಲ್ಲಿಸುತ್ತಾ ಶ್ರದ್ಧೆ ಮತ್ತು ಉತ್ಸಾಹದ ಚಿಲುಮೆಯಾಗಿ ನಂದಾದೀಪದಂತೆ ಬೆಳಗುತ್ತಿದ್ದೀರಿ. ಸುದ್ದಿ ಸಮಾಚಾರಗಳೆಂಬ ಸದಾ ಸುತ್ತಿ ಸುಳಿಯುವ ಭಯಂಕರ ಗದ್ದಲದ ಮಧ್ಯೆ ಪರಿಸರದ ಸಂಕಟಗಳ ಮೌನವನ್ನು ಆಲಿಸುವ ಕಿವಿಯಾಗಿ, ಅದರತ್ತ ಜನರ ಗಮನ ಸೆಳೆಯುವಲ್ಲಿ ನಿಜವಾದ ಚಿಂತನೆ ಮತ್ತು ಕಾಳಜಿಯನ್ನಿಟ್ಟುಕೊಂಡು ಗಟ್ಟಿ ಧ್ವನಿಯಲ್ಲಿ ಮಾತನಾಡಿದ್ದೀರಿ. ವಿಪತ್ತುಗಳಲ್ಲಿ ನೆರವು ನೀಡುವುದರಿಂದ ಹಿಡಿದು ಬಡ ಮಕ್ಕಳ ಶಿಕ್ಷಣದವರೆಗೆ ನೀವು ಅನೇಕ ಹಿರಿಕಿರಿಯ ಜೀವಗಳನ್ನು ಸ್ಪರ್ಶಿಸಿದ್ದೀರಿ. ಅನಾಥರು, ವಿಧವೆಯರು ಮತ್ತು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ದಯೆಯಲ್ಲಿ ಅಡಗಿದ ಕರುಣೆ ಕಲ್ಪವೃಕ್ಷವಾಗಿದ್ದೀರಿ. ಹೀಗಾಗಿ, ಬಿಲ್ವ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಟಿವಿ9ನ ರಂಗನಾಥ್ ಭಾರದ್ವಾಜ್ ಅವರನ್ನು ಉದ್ದೇಶಿಸಿ ಆಯೋಜಕರು ಹೇಳಿದ್ದಾರೆ.
ಬೆಂಗಳೂರು, ನವೆಂಬರ್ 18: ಟಿವಿ9 ವಾಹಿನಿಯ ಹಿರಿಯ ನಿರೂಪಕ ರಂಗನಾಥ್ ಭಾರದ್ವಾಜ್ ಅವರಿಗೆ ಪ್ರತಿಷ್ಠಿತ ಬಿಲ್ವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನ್ಯಾಷನಲ್ ಎಜುಕೇಷನ್ ಟ್ರಸ್ಟ್ನ ವೆಂಕಟಶಿವಾರೆಡ್ಡಿ ಹಾಗೂ ಸಂಸದ ತೇಜಸ್ವಿ ಸೂರ್ಯ, ಪರಿಸ್ರ ತಜ್ಞ ಡಾ. ಯಲ್ಲಪ್ಪ ರೆಡ್ಡಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ವೇಳೆ ಮಾತನಾಡಿದ ರಂಗನಾಥ್ ಭಾರದ್ವಾಜ್, ಬಿಲ್ವ ಪ್ರಶಸ್ತಿಯನ್ನು ನಿಮಗೆ ಕೊಡುತ್ತೇವೆ ಎಂದಾಗ ನನಗೆ ತುಂಬಾ ಆಶ್ಚರ್ಯ ಅಂತ ಅನ್ನಿಸ್ತು. ಅದರಲ್ಲೂ ಪರಿಸರಕ್ಕೆ ಸಂಬಂಧಪಟ್ಟಿರುವ ಈ ಪ್ರಶಸ್ತಿ ಪಡೆಯಲು ನನ್ನ ಸಾಧನೆ ಏನು? ಎಂದು ಯೋಚಿಸಿದೆ. ಆದರೆ, ಇನ್ನು ಮುಂದೆ ಪರಿಸರದ ಕೆಲಸಗಳಲ್ಲಿ, ಹೋರಾಟಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂಬ ನಾನು ಸಂಕಲ್ಪ ಮಾಡುತ್ತಿದ್ದೇನೆ. ಯಲ್ಲಪ್ಪ ರೆಡ್ಡಿಯವರ ಎಲ್ಲ ಹೋರಾಟದ ಜೊತೆಗೆ ನಾನು ನಿಲ್ಲುತ್ತೇನೆ ಎಂದಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್ನಲ್ಲಿ ಚಿನ್ನದಂಗಡಿ ದರೋಡೆ
ಮನ್ ಕಿ ಬಾತ್ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ

