ವಿಜಯೇಂದ್ರ ಮತ್ತು ಶಿವಕುಮಾರ ನಡುವಿನ ಆತ್ಮೀಯತೆ ಮುರಘಾ ಶ್ರೀಗಳ ಜನ್ಮದಿನಾಚರಣೆ ಸಂದರ್ಭದಲ್ಲಿ ಗೊತ್ತಾಯಿತು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 11, 2022 | 9:07 PM

ಪುಸ್ತಕ ಲೋಕಾರ್ಪಣೆಯ ಘೋಷಣೆಯಾಗುತ್ತಿದ್ದಂತೆ ವಿಜಯೇಂದ್ರ ಮೇಲೇಳುವಾಗ ಶಿವಕುಮಾರ ಪತ್ರಿಕೆ ಓದುತ್ತಿರುವುದನ್ನು ಗಮನಿಸುತ್ತಾರೆ. ಕೂಡಲೇ ಅವರು ಕಾಂಗ್ರೆಸ್ ನಾಯಕನ ತೊಡೆ ಮುಟ್ಟಿ, ಏಳಿ ವೇದಿಕೆ ಮಧ್ಯಭಾಗಕ್ಕೆ ಹೋಗೋಣ ಅನ್ನುತ್ತಾ ಅವರನ್ನು ಎಬ್ಬಿಸಿಕೊಂಡು ಹೋಗುತ್ತಾರೆ.

ಬೆಂಗಳೂರು ಅರಮನೆ ಮೈದಾನದಲ್ಲಿ ಮುರುಘಾಮಠದ ಡಾ ಶಿವಮೂರ್ತಿ ಮುರುಘಾ ಶರಣರ (Dr Shivamurthy Murugha Shri) ಜನ್ಮಾದಿನಾಚಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಒಂದು ಅಪರೂಪದ ಸಂಗತಿ ಘಟಿಸಿತು. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಾಡಿಯೂರಪ್ಪ ಅವರ ಮಗ ಮತ್ತು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರ ನಡುವೆ ಆತ್ಮೀಯ ಸ್ನೇಹ ಇರೋದು ಕಾರ್ಯಕ್ರಮದಲ್ಲಿ ಕಂಡುಬಂತು ಮಾರಾಯ್ರೇ. ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ. ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಸ್ತಕವೊಂದನ್ನು ಬಿಡುಗಡೆ ಮಾಡಿದರು. ನಿರೂಪಕರು ಅದರ ಬಗ್ಗೆ ಘೋಷಣೆ ಮಾಡಿದಾಗ ಶಿವಕುಮಾರ ಪ್ರಾಯಶಃ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಓದುವುದರಲ್ಲಿ ಮಗ್ನರಾಗಿರುತ್ತಾರೆ.

ಪುಸ್ತಕ ಲೋಕಾರ್ಪಣೆಯ ಘೋಷಣೆಯಾಗುತ್ತಿದ್ದಂತೆ ವಿಜಯೇಂದ್ರ ಮೇಲೇಳುವಾಗ ಶಿವಕುಮಾರ ಪತ್ರಿಕೆ ಓದುತ್ತಿರುವುದನ್ನು ಗಮನಿಸುತ್ತಾರೆ. ಕೂಡಲೇ ಅವರು ಕಾಂಗ್ರೆಸ್ ನಾಯಕನ ತೊಡೆ ಮುಟ್ಟಿ, ಏಳಿ ವೇದಿಕೆ ಮಧ್ಯಭಾಗಕ್ಕೆ ಹೋಗೋಣ ಅನ್ನುತ್ತಾ ಅವರನ್ನು ಎಬ್ಬಿಸಿಕೊಂಡು ಹೋಗುತ್ತಾರೆ. ಕೂಡಲೇ ಏಳುವ ಡಿಕೆಶಿ ಅವರನ್ನು ಮುಂದೆ ಕಳಿಸಿ ವಿಯಜೇಂದ್ರ ಹಿಂದೆ ಸರಿಯುತ್ತಾರೆ.

ಅವರ ಈ ಜೆಸ್ಚರ್ ಮನಸ್ಸಿಗೆ ಮುದ ನೀಡುತ್ತದೆ. ವಿಜಯೇಂದ್ರ ವಯಸ್ಸಿನಲ್ಲಿ ಶಿವಕುಮಾರ ಅವರಿಗಿಂತ ಬಹಳ ಕಿರಿಯರು ಅಲ್ಲದೆ ಕಾಂಗ್ರೆಸ್ ಶಾಸಕ ಮಾಜಿ ಸಚಿವರು ಮತ್ತು ರಾಷ್ಟ್ರೀಯ ಪಕ್ಷವೊಂದರ ರಾಜ್ಯಾಧ್ಯಕ್ಷರು.

ಅಂದಹಾಗೆ, ಮುರುಘಾ ಮಠದದ ಡಾ ಶಿವಮೂರ್ತಿ ಮುರುಘಾ ಶರಣರ ಜನ್ಮದಿನವನ್ನು ರಾಜ್ಯ ಸಮಾನತೆ ದಿನವನ್ನಾಗಿ ಅಚರಿಸುವುದಾಗಿ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಘೋಷಣೆ ಮಾಡಿದರು.

ಕಾರ್ಯಕ್ರಮದಲ್ಲಿ ವಿಜಯೇಂದ್ರ, ಡಿಕೆ ಶಿವಕುಮಾರ್ ಅವರಲ್ಲದೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಇಂಧನ ಸಚಿವ ವಿ ಸುನಿಲ್ ಕುಮಾರ್, ಶಾಸಕ ರಾಜಶೇಖರ ಪಾಟೀಲ ತೇಲ್ಕೂರ, ಚಿತ್ರದುರ್ಗದ ಮುರುಘಾ ಶರಣರು, ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮಿ ಭಾಗಿಯಾಗಿದ್ದರು.

ಇದನ್ನೂ ಓದಿ:  ಎಷ್ಟೋ ಸ್ವಾಮೀಜಿಗಳು ಸರ್ಕಾರಕ್ಕೆ ಹೆದರಿದ್ರು ಆದ್ರೆ ಮುರುಘಾಮಠದ ಶ್ರೀಗಳು ಹಾಗಲ್ಲ, ನಾನು ಅವರಿಗೆ ಶರಣಾಗಿದ್ದೇನೆ -ಡಿಕೆ ಶಿವಕುಮಾರ್