ಎಷ್ಟೋ ಸ್ವಾಮೀಜಿಗಳು ಸರ್ಕಾರಕ್ಕೆ ಹೆದರಿದ್ರು ಆದ್ರೆ ಮುರುಘಾಮಠದ ಶ್ರೀಗಳು ಹಾಗಲ್ಲ, ನಾನು ಅವರಿಗೆ ಶರಣಾಗಿದ್ದೇನೆ -ಡಿಕೆ ಶಿವಕುಮಾರ್

ಮುರುಗಮಠದ ಶ್ರೀಗಳ ಜನ್ಮ ದಿನಾಚರಣೆ ಮಾಡ್ತಿರೋದು ನಮಗೆಲ್ಲಾ ಭಾಗ್ಯ, ಸೌಭಾಗ್ಯ. ನಾನು ಇಲ್ಲಿಗೆ ಬಂದಿರೋದು ಶ್ರೀಗಳ ಪಾದ ಸ್ಪರ್ಶ ಮಾಡಲು. ಮೇಕೆದಾಟು ಪಾದಯಾತ್ರೆಗೆ ಶ್ರೀಗಳು ಬಂದಿದ್ದನ್ನು ನಾನು ಜೀವನ ಪರ್ಯಂತ ಮರೆಯೋಕೆ ಆಗೋದಿಲ್ಲ.-ಡಿಕೆ ಶಿವಕುಮಾರ್

ಎಷ್ಟೋ ಸ್ವಾಮೀಜಿಗಳು ಸರ್ಕಾರಕ್ಕೆ ಹೆದರಿದ್ರು ಆದ್ರೆ ಮುರುಘಾಮಠದ ಶ್ರೀಗಳು ಹಾಗಲ್ಲ, ನಾನು ಅವರಿಗೆ ಶರಣಾಗಿದ್ದೇನೆ -ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Follow us
TV9 Web
| Updated By: ಆಯೇಷಾ ಬಾನು

Updated on:Apr 11, 2022 | 12:49 PM

ಬೆಂಗಳೂರು: ಮುರುಘಾ ಶರಣರ ಹುಟ್ಟುಹಬ್ಬದ ಸಮಾರಂಭ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಭಾಷಣದ ವೇಳೆಯೇ ಅಕ್ಕಪಕ್ಕ ಕುಳಿತುಕೊಂಡು ಡಿ.ಕೆ.ಶಿವಕುಮಾರ್, ಬಿ.ವೈ.ವಿಜಯೇಂದ್ರ ಗುಪ್ತ್ ಗುಪ್ತ್ ಚರ್ಚೆ ನಡೆಸಿದ್ದಾರೆ. ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಿಕೆಶಿ ಮುರುಗಮಠದ ಶ್ರೀಗಳನ್ನು ಹೊಗಲಿದ್ದಾರೆ.

ನಿಮಗೆಲ್ಲ ತಾಳ್ಮೆ ಇದ್ರೆ ಮಾತಾಡ್ತೀನಿ, ಇಲ್ಲ ಅಂದರೆ ನಾನು ಇಲ್ಲೇ ಕೈ ಮುಗಿದು ಹೋಗಿ ಬಿಡ್ತೀನಿ. ನೀವು ಇಲ್ಲಿ ಗಮನಕೊಟ್ಟರೆ ಮಾತನಾಡುವೆ. ಇಲ್ಲ ಅಂದರೆ ನಾನು ಮಾತಾಡೋದು ವೇಸ್ಟ್ ಆಗೋಗುತ್ತೆ. ಅದಕ್ಕಾಗಿ ನಮ್ಮ ಮಾತನ್ನು ಕೇಳಿ ಎಂದು ಮನವಿ ಮಾಡಿ ಡಿಕೆ ಶಿವಕುಮಾರ್ ಭಾಷಣ ಆರಂಭಿಸಿದರು. ಈ ವೇಳೆ ಶ್ರೀಗಳ ಆಶೀರ್ವಾದ ಪಡೆಯಲು ಕೆಲವರು ಮುಂದಾದರು. ಇದಕ್ಕೆ ಗರಂ ಆಗಿ, ರೀ ಈ ಕಡೆ ಬನ್ರೀ, ನಾನು‌ ಬೇರೆ ಕಡೆ ಹೋಗಬೇಕು, ಸಾರ್ವಜನಿಕ ಸಭೆ ಇದೆ ಎಂದು ಡಿಕೆಶಿ ಗದರಿದ್ರು.

ಮುರುಗಮಠದ ಶ್ರೀಗಳ ಜನ್ಮ ದಿನಾಚರಣೆ ಮಾಡ್ತಿರೋದು ನಮಗೆಲ್ಲಾ ಭಾಗ್ಯ, ಸೌಭಾಗ್ಯ. ನಾನು ಇಲ್ಲಿಗೆ ಬಂದಿರೋದು ಶ್ರೀಗಳ ಪಾದ ಸ್ಪರ್ಶ ಮಾಡಲು. ಮೇಕೆದಾಟು ಪಾದಯಾತ್ರೆಗೆ ಶ್ರೀಗಳು ಬಂದಿದ್ದನ್ನು ನಾನು ಜೀವನ ಪರ್ಯಂತ ಮರೆಯೋಕೆ ಆಗೋದಿಲ್ಲ. ಕಷ್ಟ ಕಾಲದಲ್ಲಿ ಯಾರು ಆಶೀರ್ವಾದ ಮಾಡ್ತಾರೆ ಅದೇ ನಮಗೆ ಮುಖ್ಯ. ನಾವು ಹುಟ್ಟುವಾಗ ಯಾವುದೇ ಜಾತಿ ಅರ್ಜಿ ಹಾಕಿಲ್ಲ. ಸಾಯುವಾಗ ಮುಹೂರ್ತ ಕೂಡ ಯಾರು ನಿಗಧಿ ಮಾಡಲ್ಲ. ಹುಟ್ಟು ಸಾವಿನ ನಡುವೆ ನಾವೆಲ್ಲರೂ ಇದ್ದೇವೆ. ಸಮಾಜದ ಎಲ್ಲಾ ವರ್ಗಕ್ಕೆ ಶಕ್ತಿ ಕೊಟ್ಟವರು ಮುರುಗಮಠದ ಶ್ರೀಗಳು. ನಮ್ಮ ವಯಸ್ಸಿನಲ್ಲಿ ಒಂದೊಂದು ವರ್ಷ ಅವರಿಗೆ ಕೊಟ್ಟು, ಅವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಬೇಕು ಅಷ್ಟೇ ಎಂದು ಡಿಕೆ ಶಿವಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.

ಇನ್ನು ಇದೇ ವೇಳೆ ಡಿಕೆ ಶಿವಕುಮಾರ್, ರಾಜ್ಯದ ಕೆಲ ಶ್ರೀಗಳ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಮೇಕೆದಾಟು ಪಾದಯಾತ್ರೆಗೆ ಬರಲು ಅನೇಕರು ಹೆದರಿದರು. ಎಷ್ಟೋ ಸ್ವಾಮೀಜಿಗಳು ಸರ್ಕಾರಕ್ಕೆ ಗಢಗಢ ನಡುಗಿದರು. ಆದರೆ ಮುರುಘಾಮಠದ ಶ್ರೀಗಳು ಪಾದಯಾತ್ರೆಗೆ ಬಂದಿದ್ದರು. 12ಕ್ಕೂ ಹೆಚ್ಚು ಸ್ವಾಮೀಜಿಗಳನ್ನು ಕರೆದುಕೊಂಡು ಬಂದಿದ್ದರು. ನನ್ನ ಬೆನ್ನು ತಟ್ಟಿ, ಹೋರಾಟಕ್ಕೆ ಶ್ರೀಗಳು ಆಶೀರ್ವಾದ ಮಾಡಿದ್ರು. ಇದನ್ನ ನನ್ನ ಜೀವ ಇರೋವರೆಗೂ ಮರೆಯೋಕೆ ಸಾಧ್ಯವಿಲ್ಲ. ಕಷ್ಟ ಕಾಲದಲ್ಲಿ ಧೈರ್ಯ, ಆಶೀರ್ವಾದವೇ ನಮಗೆ ಮುಖ್ಯ. ಶರಣಾಗಿದ್ದೇನೆ, ಶರಣಾಗಿಸಿದ್ದೇನೆ ಎಂದು ಕೈ ಮುಗಿದ್ರು.

ಡಿಕೆಶಿ ಭಾಷಣ ಹೊಗಳಿದ ಮುರುಘಾ ಶ್ರೀಗಳು ಡಿಕೆಶಿ‌ ನಮ್ಮ ನಡುವಿನ ಆಶಾ ಕಿರಣ. ಡಿಕೆಶಿ ಈ ಕಾರ್ಯಕ್ರಮದಲ್ಲಿ ಸಿಂಹ ಗರ್ಜನೆ ಮಾಡಿದ್ದಾರೆ. ಡಿಕೆಶಿಯವ್ರಿಗೆ ಉತ್ಸಾಹ ಇದೆ, ಸಾಧಿಸುವ ಜೀವನೋತ್ಸಾಹ ಇದೆ. ಚಪ್ಪಾಳೆ ತಟ್ಟಿ ಎಂದು ಮುರುಘಾ ಶ್ರೀ ಡಿಕೆಶಿ ಹೊಗಳುವ ವೇಳೆ ಸಭಿಕರಿಗೆ ಚಪ್ಪಾಳೆ ತಟ್ಟುವಂತೆ ಹೇಳಿದ್ರು. ಚಪ್ಪಾಳೆ ಸರಿಯಾಗಿ ಬಾರದಿದ್ದಾಗ, ನೀವೆಲ್ಲ ಯಾಕೋ ನಿರುತ್ಸಾಹಗೊಂಡಿದ್ದೀರಿ. ನೀವೆಲ್ಲ ರೀಚಾರ್ಜ್ ಆಗಬೇಕು ಅಂತ ಸಭಿಕರಿಗೆ ಮುರುಘಾ ಶ್ರೀ ಹೇಳಿದ್ರು.

ನಮ್ಮ ಮಠದಲ್ಲಿ ನಾವು ಬಂದ ಮೇಲೆ ಲಿಂಗ ತಾರತಮ್ಯ ನಿವಾರಣೆ ಮಾಡಿದ್ದೇವೆ. ಅಸ್ಪೃಶ್ಯತೆ ನಿವಾರಣೆ ಮಾಡಿದ್ದೇವೆ. ಮಠದಲ್ಲಿ ಸವರ್ಣೀಯ ದಲಿತ ಎಂಬ ಅಸ್ಪೃಶ್ಯತೆ ಇಲ್ಲ. ಸಹ ಪಂಕ್ತಿ‌ಭೋಜನ ಇದೆ ನಮ್ಮ ಮಠದಲ್ಲಿ. ಆದ್ರೆ ದೇಶದಲ್ಲಿ ಅಸ್ಪೃಶ್ಯತೆ ಇನ್ನೂ ಇದೆ. ಇದನ್ನು ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ. ಅನಾಥ ಮಕ್ಳಳಿಗೆ ಅನಾಥಾಶ್ರಮ ತೆರೆದ ಕೀರ್ತಿ ಮುರುಘಾ ಮಠಕ್ಕೆ ಇದೆ. ಲಿಂಗಾಯತ ಮಠಗಳಲ್ಲೆಲ್ಲ ಮುರುಘಾ ಮಠವೇ ಮೊದಲು ಅನಾಥಾಶ್ರಮ ತೆರೆದಿದ್ದು ಎಂದರು.

ಇದನ್ನೂ ಓದಿ: ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಫೇಸ್​ಬುಕ್​ನಲ್ಲಿ ಜಾಹೀರಾತು ನೋಡಿ ಜ್ಯೋತಿಷಿಗಳನ್ನ ನಂಬುವ ಮುನ್ನಾ ಎಚ್ಚರ! ತುಮಕೂರಿನಲ್ಲಿ ಉದ್ಯಮಿಗೆ 46 ಲಕ್ಷ ರೂ. ವಂಚನೆ

Published On - 12:48 pm, Mon, 11 April 22

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ