ಗೋವಾ ಚುನಾವಣಾ ಪ್ರಚಾರಕ್ಕೆ ಭಾಷೆ ಗೊತ್ತಿರದ ರಮೇಶ್ ಜಾರಕಿಹೊಳಿಯನ್ನು ಬಿಜೆಪಿ ಕಳಿಸಿದೆ!
ಆಫ್ ಕೋರ್ಸ್ ಅವರಿಗೆ ಹಿಂದಿ ಭಾಷೆಯ ಜ್ಞಾನ ಖಂಡಿತವಾಗಿಯೂ ಇದೆ. ಅದರೆ ಗೋವಾ ಜನ ಬಹಳ ಕಷ್ಟಪಟ್ಟು ಹಿಂದಿ ಮಾತಾಡುತ್ತಾರೆ. ನಾವು ಹೇಳುವ ತಾತ್ಪರ್ಯವೆಂದರೆ, ಪ್ರಚಾರ ಕಾರ್ಯಕ್ಕೆ ಅಸಲಿಗೆ ಬೇಕಿರುವುದು ಏನು? ನೀವು ಪ್ರಚಾರ ಮಾಡುವ ಪ್ರದೇಶದಲ್ಲಿ ಬಹುಪಾಲು ಜನ ಆಡುವ ಭಾಷೆಯ ಅರಿವು. ರಮೇಶ್ ಅವರಿಗೆ ಅದಿಲ್ಲ.
ಗೋಕಾಕ್ ನಲ್ಲಿ ಅವರನ್ನು ಯಾರೂ ಹೆಸರಿನಿಂದಾಗಲೀ, ಸರ್, ಸಾಹೇಬರೇ ಅಂತಾಗಲೀ ಕರೆಯುವುದಿಲ್ಲ. ಜನರಿಗೆ ಅವರು ಸಾಹುಕಾರ್ ಅಂತಲೇ ಪರಿಚಿತರು. ನಾವು ಯಾರ ಬಗ್ಗೆ ಮಾತಾಡುತ್ತಿದ್ದೇವೆ ಅಂತ ನಿಮಗೆ ಗೊತ್ತಾಗಿರುತ್ತದೆ. ಗೋಕಾಕ ಶಾಸಕ (Gokak MLA) ಮತ್ತು ಮಾಜಿ ಸಚಿವ ರಮೇಶ ಜಾರಕಿಹೊಳಿ (Ramesh Jarkiholi) ಬುಧವಾರ ದಿನವಿಡೀ ಬ್ಯೂಸಿಯಾಗಿದ್ದರು ಮಾರಾಯ್ರೇ. ಅವರೀಗ ಸಚಿವ ಸ್ಥಾನದಲ್ಲಿರದಿದ್ದರೂ ಸುತ್ತ ಮುತ್ತ ಜನ ಮಾತ್ರ ಇದ್ದೇ ಇರುತ್ತಾರೆ. ಹಲವು ವಿವಾದಗಳ ಹೊರತಾಗಿಯೂ ಅವರ ಜನಪ್ರಿಯತೆ ಕುಗ್ಗಿಲ್ಲ. ಸರಿ, ವಿಷಯಕ್ಕೆ ಬರುವ. ಸಾಯಂಕಾಲ ಗೋವಾಗೆ (Goa) ಹೊರಡುವ ಮೊದಲು ರಮೇಶ್ ಅವರು ಸ್ವಚ್ಛ ಭಾರತ್ ಮಿಷನ್ ಅಡಿ ಗೋಕಾಕ ನಗರ ಸಭೆಗೆ ಒದಗಿಸಲಾಗಿರುವ ಸ್ವಚ್ಛತಾ ವಾಹನಗಳನ್ನು ಲೋಕಾರ್ಪಣೆ ಮಾಡಿದರು. ವಾಹನಗಳಿಗೆ ಕಟ್ಟಿದ ರಿಬ್ಬನ್ ಅವರು ಕಟ್ ಮಾಡುತ್ತಿರುವುದು ವಿಡಿಯೋನಲ್ಲಿ ಕಾಣುತ್ತದೆ. ಅದಾದ ಮೇಲೆ, ಬೇರೆ ಬೇರೆ ಹಾಸ್ಟೆಲ್ ಗಳಲ್ಲಿರುವ ಮಕ್ಕಳಿಗೆ ಹಾಸಿಗೆಗಳನ್ನು ವಿತರಿಸಿ, ದಿವ್ಯಾಂಗರಿಗೆ ವಾಹನಗಳ ಕೀಗಳನ್ನು ನೀಡಿದರು. ಬಳಿಕ ಸಾಹುಕಾರ ನಗರ ಸಭೆಯ ಪೌರಕಾರ್ಮಿಕರಿಗೆ ಸುರಕ್ಷಾ ಕವಚಗಳನ್ನು ವಿತರಿಸಿದರು. ಇದೆಲ್ಲ ಆದ ಬಳಿಕ ಶಾಸಕರು ಗೋವಾಗೆ ತೆರಳಿದರು.
ಗೋವಾನಲ್ಲಿ ವಿಧಾನ ಸಭಾ ಚುನಾವಣೆ ಪ್ರಚಾರ ಕಾರ್ಯ ರಂಗೇರುತ್ತಿದೆ. ರಾಷ್ಟ್ರೀಯ ಪಕ್ಷಗಳ ಪ್ರಮುಖ ನಾಯಕರು ಒಬ್ಬೊಬ್ಬರಾಗಿ ಗೋವಾಗೆ ಬಂದು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ರಮೇಶ್ ಅವರು ಗೋವಾದ ಜನತೆಗೆ ಪರಿಚಿತರೋ ಮತ್ತು ಅವರಿಗೆ ಸ್ಥಳೀಯ ಕೊಂಕಣಿ ಭಾಷೆ ಗೊತ್ತಿದೆಯೋ ಇಲ್ಲವೋ ಅಂತ ನಮಗೆ ಗೊತ್ತಿಲ್ಲ ಮಾರಾಯ್ರೇ. ಅವರು ಇಂಗ್ಲಿಷ್ ಭಾಷೆಯಲ್ಲಿ ಸಹ ನಿರರ್ಗಳವಾಗಿ ಮಾತಾಡಲಾರರು.
ಆಫ್ ಕೋರ್ಸ್ ಅವರಿಗೆ ಹಿಂದಿ ಭಾಷೆಯ ಜ್ಞಾನ ಖಂಡಿತವಾಗಿಯೂ ಇದೆ. ಅದರೆ ಗೋವಾ ಜನ ಬಹಳ ಕಷ್ಟಪಟ್ಟು ಹಿಂದಿ ಮಾತಾಡುತ್ತಾರೆ. ನಾವು ಹೇಳುವ ತಾತ್ಪರ್ಯವೆಂದರೆ, ಪ್ರಚಾರ ಕಾರ್ಯಕ್ಕೆ ಅಸಲಿಗೆ ಬೇಕಿರುವುದು ಏನು? ನೀವು ಪ್ರಚಾರ ಮಾಡುವ ಪ್ರದೇಶದಲ್ಲಿ ಬಹುಪಾಲು ಜನ ಆಡುವ ಭಾಷೆಯ ಅರಿವು. ರಮೇಶ್ ಅವರಿಗೆ ಅದಿಲ್ಲ. ಅಲ್ಲದೆ ಅವರು ಮಾಸ್ ಲೀಡರ್ ಅಲ್ಲ, ಜನರನ್ನು ಸೇರಿಸುವುದು, ಆಕರ್ಷಿಸುವುದು ಅವರಿಂದಾಗದು.
ಬಿಜೆಪಿ ಯಾವ ಮಾನದಂಡಗಳನ್ನಿಟ್ಟುಕೊಂಡು ಅಲ್ಲಿಗೆ ಕಳಿಸಿದೆಯೋ ಅಂತ ಅರ್ಥವಾಗುತ್ತಿಲ್ಲ ಮಾರಾಯ್ರೇ.