ಅಪಪ್ರಚಾರ ಖಂಡಿಸಿ ಬಿಜೆಪಿ ಸಮಾವೇಶ: ಧರ್ಮಸ್ಥಳದಲ್ಲಿ ಜನಸಾಗರ, ಎಲ್ಲೆಲ್ಲೂ ಕೇಸರಿಮಯ

Updated on: Sep 01, 2025 | 2:55 PM

ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಅಪಪ್ರಚಾರ ಖಂಡಿಸಿ ಬಿಜೆಪಿ ಹಮ್ಮಿಕೊಂಡಿರುವ ‘ಧರ್ಮಸ್ಥಳ ಚಲೋ’ ಕಾರ್ಯಕ್ರಮದ ಕಾರಣ ಧರ್ಮಸ್ಥಳದಲ್ಲಿ ಭಾರಿ ಜನಸಂದಣಿ ಸೇರಿದೆ. ದೇವಸ್ಥಾನದ ಆಡಳಿತವು ಭಕ್ತರಿಗೆ ಸೂಚನೆ ನೀಡಿ, ಸಾಲಿನಲ್ಲಿ ನಿಲ್ಲುವಂತೆ ಕೋರಿದೆ. ಧರ್ಮಸ್ಥಳ ಇಡೀ ಕೇಸರಿಮಯವಾಗಿದ್ದು, ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಂದ ತುಂಬಿದೆ. ವಿಡಿಯೋ ಇಲ್ಲಿದೆ ನೋಡಿ.

ಧರ್ಮಸ್ಥಳ, ಸೆಪ್ಟೆಂಬರ್ 1: ಧರ್ಮಸ್ಥಳ ಕ್ಷೇತ್ರದ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ಅದನ್ನು ಖಂಡಿಸಿ ‘ಧರ್ಮಸ್ಥಳ ಚಲೋ’ ಸಮಾವೇಶ ಹಮ್ಮಿಕೊಂಡಿದೆ. ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಒಟ್ಟಾಗಿ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದು, ಇಡೀ ಕ್ಷೇತ್ರ ಕೇಸರಿಮಯವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ