ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ; ದೀರ್ಘದಂಡ ನಮಸ್ಕಾರ ಹಾಕಿದ ಅಭಿಮಾನಿ

|

Updated on: Jun 05, 2024 | 7:50 PM

ಲೋಕಸಭಾ ಚುನಾವಣೆ(Lok Sabha Election)ಯ ಮತ ಎಣಿಕೆ ಮುಗಿದು ನಿನ್ನೆಯೇ ಫಲಿತಾಂಶ ಹೊರ ಬಂದಿದೆ. ಈ ಚುನಾವಣೆಯಲ್ಲಿ ಬಿಜೆಪಿ(Bjp)ಗೆ ಅಧಿಕ ಸ್ಥಾನ ಬಂದರೆ ಮನೆಯಿಂದ ಮಠದವರೆಗೂ ದೀರ್ಘದಂಡ ನಮಸ್ಕಾರ ಹಾಕುವ ಹರಕೆ ಹೊತ್ತಿದ್ದ ಬಿಜೆಪಿ ಅಭಿಮಾನಿ ಯುವಕ ಇಂದು(ಜೂ.05) ಹರಕೆ ತೀರಿಸಿದ್ದಾನೆ.

ವಿಜಯಪುರ, ಜೂ.05: ಲೋಕಸಭಾ ಚುನಾವಣೆ(Lok Sabha Election)ಯ ಮತ ಎಣಿಕೆ ಮುಗಿದು ನಿನ್ನೆ(ಜೂ.04)ಯೇ ಫಲಿತಾಂಶ ಹೊರ ಬಂದಿದೆ. ಈ ಚುನಾವಣೆಯಲ್ಲಿ ಬಿಜೆಪಿ(Bjp)ಗೆ ಅಧಿಕ ಸ್ಥಾನ ಬಂದರೆ ಮನೆಯಿಂದ ಮಠದವರೆಗೂ ದೀರ್ಘದಂಡ ನಮಸ್ಕಾರ ಹಾಕುವ ಹರಕೆ ಹೊತ್ತಿದ್ದ ಬಿಜೆಪಿ ಅಭಿಮಾನಿ ಯುವಕ ಇಂದು ಹರಕೆ ತೀರಿಸಿದ್ದಾನೆ. ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಶಿವು ಮಂಗಳೂರು ಎಂಬ ಬಿಜೆಪಿ ಪಕ್ಷದ ಅಭಿಮಾನಿ 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ ಬಂದರೆ ಕೊಲ್ಹಾರ ಪಟ್ಟಣದಲ್ಲಿರುವ ತಮ್ಮ ಮನೆಯಿಂದ ಪಟ್ಟಣದ ದಿಗಂಭರೇಶ್ವರ ಮಠದವರೆಗೂ ದೀರ್ಘ ದಂಡ ನಮಸ್ಕಾರ ಹಾಕುವ ಹರಕೆ ಕಟ್ಟಿಕೊಂಡಿದ್ದ. ಹಾಗಾಗಿ ಫಲಿತಾಂಶ ಬಂದಿದ್ದು, ಬಿಜೆಪಿ ಅಧಿಕ ಸ್ಥಾನಗಳನ್ನು ಗಳಿಸಿದ ಹಿನ್ನಲೆ ಇಂದು ತಮ್ಮ ಮನೆಯಿಂದ 2 ಕಿಲೋ ಮೀಟರ್ ದೂರದಲ್ಲಿರುವ ಈ ದಿಗಂಭರೇಶ್ವರ ಮಠದವರೆಗೂ ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದ್ದಾರೆ. ದೀರ್ಘ ದಂಡ ನಮಸ್ಕಾರ ಹಾಕುತ್ತಾ ಮಠ ತಲುಪಿದ ಬಳಿಕ ಮಠದಲ್ಲಿ ಪೂಜೆ ಮಾಡಲಾಯಿತು. ಈ ವೇಳೆ ಮಾಜಿ ಸಚಿವ ಎಸ್​ಕೆ ಬೆಳ್ಳುಬ್ಬಿ ಪತ್ನಿ ಕಸ್ತೂರಿ ಹಾಗೂ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on