Belagavi: ಸ್ವಂತ ಸಾಮರ್ಥ್ಯದಿಂದ ರಾಜ್ಯದಲ್ಲಿ ಬಿಜೆಪಿ ಇದುವರೆಗೆ ಅಧಿಕಾರಕ್ಕೆ ಬಂದಿಲ್ಲ ಮುಂದೆಯೂ ಬರೋದಿಲ್ಲ: ಹೆಚ್ ವಿಶ್ವನಾಥ್
ಅವರು ಕೆಎಸ್ ಈಶ್ವರಪ್ಪ ಅಲ್ಲ, ಹೆಚ್ ಎಂ ಈಶ್ವರಪ್ಪ ಎಂದು ಹೇಳಿ ಹೆಚ್ ಎಂ ಎಂದರೆ ಹುಚ್ ಮುಂಡೇದು ಅಂತರ್ಥ ಅಂದರು. ಅವರ ಮಾತಿಗೆ ಜೊತೆಯಲ್ಲಿದ್ದವರು ಮಾತ್ರ ನಕ್ಕರು.
ಬೆಳಗಾವಿ: ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ (H Vishwanath) ಇನ್ನೂ ಬಿಜೆಪಿಗೆ ರಾಜೀನಾಮೆ ನೀಡಿಲ್ಲ ಅದರೂ ಕಾಂಗ್ರೆಸ್ ಪಕ್ಷವನ್ನು ತನ್ನ ಪಕ್ಷ ಎನ್ನುತ್ತಾರೆ! ಬೆಳಗಾವಿಯಲ್ಲಿಂದು ಸುದ್ದ್ದಿಗಾರರೊಂದಿಗೆ ಮಾತಾಡಿದ ಅವರು ಬಿಜೆಪಿ ಯಾವತ್ತೂ ತನ್ನ ಸ್ವಂತ ಸಾಮರ್ಥ್ಯದಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿಲ್ಲ, ಒಮ್ಮೆ ಹೆಚ್ ಡಿ ಕುಮಾರಸ್ವಾಮಿಯವರ (HD Kumaraswamy) ಬೆಂಬಲ ಪಡೆದು ಸರ್ಕಾರ ರಚಿಸಿದರು ಇನ್ನೊಮ್ಮೆ ನಮ್ಮ ಹೆಗಲ ಮೇಲೆ ಕೂತು ಅಧಿಕಾರಕ್ಕೆ ಬಂದರು ಎಂದು ವಿಶ್ವನಾಥ ಹೇಳಿದರು. ಇದುವರೆಗೆ ಅದಯ ಸ್ವಂತ ವರ್ಚಸ್ಸಿನಿಂದ ಅಧಿಕಾರಕ್ಕೆ ಬಂದಿಲ್ಲ ಮುಂದೆಯೂ ಬರೋದಿಲ್ಲ ಎಂದು ಶಾಸಕ ಹೇಳಿದರು. ಬಿಜೆಪಿ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪನವರ (KS Eshwarappa) ಪ್ರಸ್ತಾಪ ಬಂದಾಗ ವಿಶ್ವನಾಥ್, ಅವರು ಕೆಎಸ್ ಈಶ್ವರಪ್ಪ ಅಲ್ಲ, ಹೆಚ್ ಎಂ ಈಶ್ವರಪ್ಪ ಎಂದು ಹೇಳಿ ಹೆಚ್ ಎಂ ಎಂದರೆ ಹುಚ್ ಮುಂಡೇದು ಅಂತರ್ಥ ಅಂದರು. ಅವರ ಮಾತಿಗೆ ಜೊತೆಯಲ್ಲಿದ್ದವರು ಮಾತ್ರ ನಕ್ಕರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos