ವಿಜಯೇಂದ್ರ ಬಗ್ಗೆ ಸೂಕ್ತ ಸಮಯದಲ್ಲಿ ವರಿಷ್ಠರಿಂದ ತೀರ್ಮಾನ: ಆರ್ ಅಶೋಕ್

| Updated By: ಗಣಪತಿ ಶರ್ಮ

Updated on: Aug 14, 2024 | 1:03 PM

ಕರ್ನಾಟಕ ರಾಜಕಾರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಗ್ಗೆ ಸ್ವಪಕ್ಷದ ಶಾಸಕರ ಆಕ್ಷೇಪ ಹೆಚ್ಚಾಗುತ್ತಿದೆ. ಈ ಮಧ್ಯೆ, ಬಿವೈ ವಿಜಯೇಂದ್ರ ರಾಜೀನಾಮೆಗೆ ಒತ್ತಡ ಹೆಚ್ಚಾಗಿರುವ ವಿಚಾರವಾಗಿ ಪ್ರತಿಪಕ್ಷ ನಾಯಕ ಆರ್ ಅಶೋಕ ‘ಟಿವಿ9’ಗೆ ಪ್ರತಿಕ್ರಿಯೆ ನೀಡಿದ್ದು, ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅದೇನೆಂದು ತಿಳಿಯಲು ವಿಡಿಯೋ ನೋಡಿ.

ಬೆಂಗಳೂರು, ಆಗಸ್ಟ್ 14: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ರಾಜೀನಾಮೆಗೆ ಬಿಜೆಪಿ ಶಾಸಕರಿಂದಲೇ ಒತ್ತಾಯ ವ್ಯಕ್ತವಾಗಿರುವ ವಿಚಾರ ಈಗಾಗಲೇ ಬಹಳ ಚರ್ಚೆ ಆಗಿದೆ. ಶಾಸಕರ ಹೇಳಿಕೆಯನ್ನು ಕೇಂದ್ರದ ನಾಯಕರು ಗಮನಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಅವರು ನಿಲುವು ತೆಗೆದುಕೊಳ್ಳುವ ವಿಶ್ವಾಸವಿದೆ. ನಾನೂ ಸಹ ಸಮಯ ನೋಡಿ ದೆಹಲಿ ನಾಯಕರ ಭೇಟಿಯಾಗುತ್ತೇನೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು. ಬೆಂಗಳೂರಿನಲ್ಲಿ ‘ಟಿವಿ9’ಗೆ ಹೇಳಿಕೆ ನೀಡಿದ ಅವರು, ರಾಜ್ಯದ ಬೆಳವಣಿಗೆಗಳ ಬಗ್ಗೆ ವರಿಷ್ಠರ ಗಮನಕ್ಕೆ ತರುತ್ತೇನೆ. ಶೀಘ್ರದಲ್ಲೇ ಒಂದು ಪರಿಹಾರ ಕೊಡಿ ಎಂದು ವಿನಂತಿ ಮಾಡುತ್ತೇನೆ. ಇದನ್ನು ನಾನು ದೆಹಲಿಗೆ ಹೋದ ಸಂದರ್ಭದಲ್ಲಿ ಹೇಳುತ್ತೇನೆ ಎಂದರು.

ಇದನ್ನೂ ಓದಿ: ಚನ್ನಪಟ್ಟಣ ಉಪ ಚುನಾವಣೆ: ಕುಮಾರಸ್ವಾಮಿ ನಿರ್ಧಾರದ ಮೇಲೆ ಯೋಗೇಶ್ವರ್ ಭವಿಷ್ಯ

ಬಿಜೆಪಿ ಬೆಳವಣಿಗೆ ಬಗ್ಗೆ ಆರ್​ಎಸ್​ಎಸ್​ ಸಭೆ ನಡೆಸುವ ವಿಚಾರ ನನ್ನ ಗಮನದಲ್ಲಿ ಇಲ್ಲ. ಆರ್​​ಎಸ್​​ಎಸ್​​ ಯಾವುದೇ ಸಂದರ್ಭದಲ್ಲಿ ರಾಜಕಾರಣ ಮಾಡಲ್ಲ. 40 ವರ್ಷದ ಹಿಂದೆಯೇ ನಾನು ಆರ್​​ಎಸ್​​ಎಸ್ ಚಡ್ಡಿ ಹಾಕಿದವನು. ಆರ್​ಎಸ್​​ಎಸ್​​ನ ನೀತಿ, ನಿಯಮ ಎಲ್ಲವೂ ನನಗೂ ಗೊತ್ತಿದೆ. ಆರ್​ಎಸ್​​ಎಸ್​ ರಾಜಕಾರಣದಲ್ಲಿ ಭಾಗವಹಿಸುವುದು ಗೊತ್ತಿಲ್ಲ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on