ಕಾಂಗ್ರೆಸ್ ಲಿಂಗಾಯತ-ವಿರೋಧಿ ಅಂತ ಸುಳ್ಳು ನೆರೇಟಿವ್ ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ: ಪರಮೇಶ್ವರ್
ಇತ್ತೀಚಿಗೆ ತಾನು ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾದಾಗ ಅವರು ಒಂದು ದೇಶ ಒಂದು ಚುನಾವಣೆ ಮಸೂದೆಯ ಪ್ರಸ್ತಾಪ ಮಾಡಿದ್ದರು ಮತ್ತು ತಮ್ಮ ಸರ್ಕಾರ ಯಾಕೆ ಅದನ್ನು ಜಾರಿಗೆ ತರುವ ನಿರ್ಧಾರ ಮಾಡಿಕೊಂಡಿದೆ ಅನ್ನೋದನ್ನು ವಿವರಿಸಿದ್ದರು, ಅದರ ಬಗ್ಗೆ ಬಹಳಷ್ಟು ಚರ್ಚೆಗಳಾಗಬೇಕಿದೆ ಎಂದು ಪರಮೇಶ್ವರ್ ಹೇಳಿದರು.
ಬೆಳಗಾವಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್, ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷವನ್ನು ಒಂದು ಲಿಂಗಾಯತ ವಿರೋಧಿ ಪಕ್ಷ ಅಂತ ಒಂದು ಸುಳ್ಳು ನೆರೇಟಿವ್ ಸೃಷ್ಟಿ ಮಾಡಲು ಹೊರಟಿದ್ದಾರೆ, ಅದನ್ನವರು ಯಾಕೆ ಮಾಡುತ್ತಿದ್ದಾರೆ ಅಂತ ಚೆನ್ನಾಗಿ ಗೊತ್ತಿದೆ, ಆದರೆ ಕಾಂಗ್ರೆಸ್ ಎಲ್ಲ ಧರ್ಮ ಮತ್ತು ಜಾತಿಯವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪಕ್ಷ, ನಮ್ಮ ಪಕ್ಷದಲ್ಲಿ ಲಿಂಗಾಯತ ಶಾಸಕ ಮತ್ತು ಮಂತ್ರಿಗಳಿಲ್ಲವೇ? ಒಕ್ಕಲಿಗ, ದಲಿತ ಶಾಸಕರೂ ಇದ್ದಾರೆ, ಎಲ್ಲ ಜಾತಿ-ಧರ್ಮಗಳನ್ನು ಸಮಾನವಾಗಿ ನೋಡುವ ಪಕ್ಷ ತಮ್ಮದು ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರತಿಭಟನೆಕಾರರ ಮೇಲೆ ಲಾಠಿಚಾರ್ಜ್ ಹಿಂದೆ ಸರ್ಕಾರದ ದುರುದ್ದೇಶ ಅಡಗಿಲ್ಲ: ಜಿ ಪರಮೇಶ್ವರ್
Latest Videos