ಕಾಂಗ್ರೆಸ್​ನ ನಿಜವಾದ ಮುಖ ಬಯಲಾಗಿದೆ; ದೆಹಲಿ ಸ್ಫೋಟದ ಕುರಿತ ಹೇಳಿಕೆಗೆ ಬಿಜೆಪಿ ಟೀಕೆ

Updated on: Nov 18, 2025 | 9:31 PM

"ಕಾಂಗ್ರೆಸ್‌ನ ನಿಜವಾದ ಮುಖ ಮತ್ತೊಮ್ಮೆ ಬಯಲಾಗಿದೆ. 12 ಅಮಾಯಕರನ್ನು ಕೊಂದ ಭಯೋತ್ಪಾದಕನನ್ನು ಕಾಂಗ್ರೆಸ್ ಸಂಸದರೊಬ್ಬರು 'ದಾರಿ ತಪ್ಪಿದ ಯುವಕ' ಎಂದು ಕರೆಯುತ್ತಿದ್ದಾರೆ. ಅದಕ್ಕಾಗಿಯೇ ದೇಶವು ಕಾಂಗ್ರೆಸ್ ಅನ್ನು ಎಂದಿಗೂ ನಂಬಲು ಸಾಧ್ಯವಿಲ್ಲ" ಎಂದು ಬಿಜೆಪಿ ವಕ್ತಾರ ಶಹಜಾದ್ ಪೂನಾವಾಲಾ ಹೇಳಿದ್ದಾರೆ. ಸಮಾಧಾನದ ಹೆಸರಿನಲ್ಲಿ 'ಆತಂಕಿ ಬಚಾವೋ ಗ್ಯಾಂಗ್' ಮತ್ತೊಮ್ಮೆ ಸಕ್ರಿಯವಾಗಿದೆ ಎಂದು ಅನಿಸುತ್ತಿದೆ. ಇದು ಹೊಸದೇನಲ್ಲ; ಇದು ಅವರ ಹಳೆಯ ತಂತ್ರವಾಗಿದೆ" ಎಂದು ಬಿಜೆಪಿ ನಾಯಕ ಆಕ್ರೋಶ ಹೊರಹಾಕಿದ್ದಾರೆ.

ನವದೆಹಲಿ, ನವೆಂಬರ್ 18: ದೆಹಲಿ ಸ್ಫೋಟದ ಆರೋಪಿ ದಾರಿ ತಪ್ಪಿದ ಮುಸ್ಲಿಂ ಎಂದು ಹೇಳಿದ್ದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ (Imran Masood) ಅವರ ಹೇಳಿಕೆಯ ಕುರಿತು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ವಾಗ್ದಾಳಿ ನಡೆಸಿದ್ದಾರಎ. “ದೆಹಲಿ ಸ್ಫೋಟದ ಮಾಸ್ಟರ್ ಮೈಂಡ್ ಆತ್ಮಾಹುತಿ ಬಾಂಬ್ ದಾಳಿಯನ್ನು ಸಮರ್ಥಿಸುತ್ತಿದ್ದಾನೆ. ಮತ್ತೊಂದೆಡೆ, ಭಯೋತ್ಪಾದನೆಯ ಪ್ರಚೋದಕನಂತೆ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಈ ಜನರು ದಾರಿ ತಪ್ಪಿದ ಯುವಕರು ಎಂದು ಹೇಳುತ್ತಾರೆ. ಕಾಂಗ್ರೆಸ್​ನ ನಿಜವಾದ ಮುಖ ಮತ್ತೊಮ್ಮೆ ಬಯಲಾಗಿದೆ. ಕಾಂಗ್ರೆಸ್ ವ್ಯವಸ್ಥೆಯು ‘ರಾಷ್ಟ್ರೀಯ ನೀತಿ’ಗಿಂತ ‘ಮತ ಬ್ಯಾಂಕ್ ನೀತಿ’ಗೆ ಆದ್ಯತೆ ನೀಡುತ್ತಿದೆ. ಈ ಭಯೋತ್ಪಾದಕ ದಾಳಿ ನಡೆದಾಗಿನಿಂದ ಕಾಂಗ್ರೆಸ್ ಭಯೋತ್ಪಾದಕರನ್ನು ರಕ್ಷಿಸಲು ಪ್ರಾರಂಭಿಸಿದೆ. ಸಮಾಧಾನದ ಹೆಸರಿನಲ್ಲಿ ‘ಆತಂಕಿ ಬಚಾವೋ ಗ್ಯಾಂಗ್’ ಮತ್ತೊಮ್ಮೆ ಸಕ್ರಿಯವಾಗಿದೆ ಎಂದು ಅನಿಸುತ್ತಿದೆ. ಇದು ಹೊಸದೇನಲ್ಲ; ಇದು ಅವರ ಹಳೆಯ ತಂತ್ರವಾಗಿದೆ” ಎಂದು ಬಿಜೆಪಿ ನಾಯಕ ಆಕ್ರೋಶ ಹೊರಹಾಕಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 18, 2025 09:03 PM