ರೇವಣ್ಣ, ರೇವಣ್ಣನ ಮಕ್ಕಳೇ ಆಡಳಿತ ಮಾಡಬೇಕು ಅಂತೇನಿಲ್ಲ: ಬಿಜೆಪಿ ಮುಖಂಡ ಕಿಡಿ

Updated By: ಗಂಗಾಧರ​ ಬ. ಸಾಬೋಜಿ

Updated on: Dec 03, 2025 | 10:34 PM

ಪ್ರಜ್ವಲ್​​ ಇಲ್ಲ ಅಂದರೆ ಮತ್ತೊಬ್ಬ ನಾಯಕ ಬರುತ್ತಾರೆ. ರೇವಣ್ಣ, ರೇವಣ್ಣನ ಕುಟುಂಬ ಇಲ್ಲದೆ ಹೋದರೂ ಹಾಸನ ಜಿಲ್ಲೆ ಅಭಿವೃದ್ಧಿ ಆಗುತ್ತೆ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಹೇಳಿದ್ದಾರೆ. ಹೈಕೋರ್ಟ್​ನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅರ್ಜಿ ವಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಮಾತನಾಡಿದರು.

ಹಾಸನ, ಡಿಸೆಂಬರ್​ 03: ಹೈಕೋರ್ಟ್​ನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅರ್ಜಿ ವಜಾ ಹಿನ್ನಲೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ, ಹೈಕೋರ್ಟ್ ತೀರ್ಪು ಸ್ವಾಗತಾರ್ಹ. ತಪ್ಪು ಯಾರೇ ಮಾಡಿದರೂ ಶಿಕ್ಷೆ ಆಗುತ್ತೆ. ಕೋರ್ಟ್ ತೀರ್ಪಿಗೆ ತಲೆಬಾಗಬೇಕು. ಪ್ರಜ್ವಲ್ ಇಲ್ಲ ಅಂದರೆ ಮತ್ತೊಬ್ಬ ನಾಯಕ ಬರುತ್ತಾನೆ. ರೇವಣ್ಣ, ರೇವಣ್ಣನ ಮಕ್ಕಳೇ ಆಡಳಿತ ಮಾಡಬೇಕು ಅಂತೇನಿಲ್ಲ, ಅವರು ಇಲ್ಲದೆ ಹೋದರೂ ಜಿಲ್ಲೆ ಅಭಿವೃದ್ಧಿ ಆಗುತ್ತೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.