ಬೆಂಗಳೂರು: ರಾಜ್ಯ ವಿಧಾನ ಸಭೆಯಲ್ಲಿ ವಿರೋಧ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷ ಬಜೆಟ್ ಅಧಿವೇಶನ (Budget Session) ಶುರುವಾದರೂ ಸದನದಲ್ಲಿ ತನ್ನ ನಾಯಕನನ್ನು ಆಯ್ಕೆ ಮಾಡಿಕೊಳ್ಳದಿರುವುದು ಆಡಳಿತ ಪಕ್ಷದ ಶಾಸಕರಿಂದ ಗೇಲಿಗೊಳಗಾಗುತ್ತಿದೆ. ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ (Laxman Savadi), ತಮ್ಮ ಪಕ್ಷದಿಂದ ಮುಖ್ಯಮಂತ್ರಿಯ ಆಯ್ಕೆ ಮತ್ತು ಸಚಿವ ಸಂಪುಟದ ರಚನೆ ವಿಳಂಬವಾದಾಗ ಬಿಜೆಪಿ ನಾಯಕರು ಬಹಳ ಟೀಕೆ ಮಾಡಿದರು. ಮಂತ್ರಿಮಂಡಲ ರಚನೆ (cabinet formation) ಒಂದು ಕ್ಲಿಷ್ಟಕರವಾದ ವಿಚಾರ, ಯಾಕೆಂದರೆ ಸಾಮಾಜಿಕ ನ್ಯಾಯ, ಜಿಲ್ಲಾವಾರು ಪ್ರಾತಿನಿಧ್ಯ, ಸಮುದಾಯ-ಜಾತಿಗಳ ಆದ್ಯತೆ ಮೊದಲಾದ ಸಂಗತಿಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಸವದಿ ಹೇಳಿದರು. ಬಿಜೆಪಿ ಇದ್ಯಾವುದೂ ಮಾಡಬೇಕಿಲ್ಲವಾದರೂ ಶಾಸಕಾಂಗ ಪಕ್ಷದ ನಾಯಕನ ಆರಿಸಲು ಒಂದೂವರೆ ತಿಂಗಳಿಂದ ಕಸರತ್ತು ನಡೆಸಿದ್ದಾರೆ. ಬಿಎಸ್ ಯಡಿಯೂರಪ್ಪ 2-3 ದಿನ ಅಂತ ಹೇಳುತ್ತಿದ್ದಾರೆ, ಆದರೆ ಬಜೆಟ್ ಅಧಿವೇಶನ ಮುಗಿದರೂ ವಿರೋಧ ಪಕ್ಷ ನಾಯಕನ ಆಯ್ಕೆ ಲಕ್ಷಣಗಳು ಕಾಣುತ್ತಿಲ್ಲ ಎಂದು ಲಕ್ಷ್ಮಣ ಸವದಿ ಮೂದಲಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ