Budget Session: ಸರ್ ನೀವು ಮುಖ್ಯಮಂತ್ರಿಯಾಗಬೇಕಿತ್ತು ಅಂತ ಬಿಜೆಪಿ ಶಾಸಕ ಕಾಲೆಳೆದಾಗ ಡಿಕೆ ಶಿವಕುಮಾರ್ ಕೊಟ್ಟ ಉತ್ತರ ಏನು ಗೊತ್ತಾ?

Budget Session: ಸರ್ ನೀವು ಮುಖ್ಯಮಂತ್ರಿಯಾಗಬೇಕಿತ್ತು ಅಂತ ಬಿಜೆಪಿ ಶಾಸಕ ಕಾಲೆಳೆದಾಗ ಡಿಕೆ ಶಿವಕುಮಾರ್ ಕೊಟ್ಟ ಉತ್ತರ ಏನು ಗೊತ್ತಾ?

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 03, 2023 | 5:47 PM

ಅವರ ಮಾತಿಗೆ ತಲೆ ಕೆಡಿಸಿಕೊಳ್ಳದ ಶಿವಕುಮಾರ್; ಅದಿರಲಿ ರಾಜಕಾರಣ ಅಮೇಲೆ ಮಾತಾಡೋಣ ಎಂದು ಶಾಂತವಾಗಿ ಉತ್ತರಿಸುತ್ತಾರೆ.

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DK Shivakumar) ಇಂದು ಸದನದಲ್ಲಿ ಮಾತಾಡುವಾಗ ಬದಕು-ಸಾವು ಸಾಧನೆ ಬಗ್ಗೆ ಹಿಂದೆ ತಮ್ಮೊಂದಿಗೆ ಕೆಲಸಮಾಡುತ್ತಿದ್ದ ಮುದ್ನೂರ್ (Mudnoor) ಹೆಸರಿನ ಅಧಿಕಾರಿಯೊಬ್ಬರು ತಮಗೆ ಹೇಳಿದನ್ನು ವಿವರಿಸುತ್ತಿದ್ದಾಗ ಬಿಜೆಪಿ ಶಾಸಕ ಸುರೇಶ್ ಗೌಡ (Suresh Gowda) ಕಾಲೆಳೆಯುವ ಪ್ರಯತ್ನ ಮಾಡಿದರು. ಮಾನವ ಏನಾದರೂ ಸಾಧನೆ ಮಾಡಬೇಕಾದರೆ ಮೀನಮೇಷ ಎಣಿಸುತ್ತಾ ಕೂರಬಾರದು, ಯಾಕೆಂದರೆ ಬದುಕು ಶಾಶ್ವತವಲ್ಲ, ಅಂದುಕೊಂಡಿದ್ದನ್ನು ಮಾಡಲು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಅಂತ ಮುದ್ನೂರ್ ಅವರು ಹೇಳಿದ ಮರುದಿನ ಬೆಳಗ್ಗೆ ಖುದ್ದು ತಾವೇ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದನ್ನು ಶಿವಕುಮಾರ್ ಗಂಭೀರವಾಗಿ ಹೇಳುತ್ತಿದ್ದಾಗ ಸುರೇಶ್ ಗೌಡ ಸರ್ ನೀವು ಮುಖ್ಯಮಂತ್ರಿಯಾಗಬೇಕಿತ್ತು ಅನ್ನುತ್ತಾರೆ. ಅವರ ಮಾತಿಗೆ ತಲೆ ಕೆಡಿಸಿಕೊಳ್ಳದ ಶಿವಕುಮಾರ್; ಅದಿರಲಿ ರಾಜಕಾರಣ ಅಮೇಲೆ ಮಾತಾಡೋಣ ಎಂದು ಶಾಂತವಾಗಿ ಉತ್ತರಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ