ಆಂಜನೇಯ ಜಾತ್ರೆಯಲ್ಲಿ ಗಮನ ಸೆಳೆದ ಜಗಜಟ್ಟಿಗಳ ಸೆಣೆಸಾಟ: ನೆರೆದಿದ್ದ ಜನರಿಗೆ ಮನೋರಂಜನೆ ನೀಡಿದ ಕುಸ್ತಿ ಸ್ಪರ್ಧೆ

ಆಂಜನೇಯ ಜಾತ್ರೆಯಲ್ಲಿ ಗಮನ ಸೆಳೆದ ಜಗಜಟ್ಟಿಗಳ ಸೆಣೆಸಾಟ: ನೆರೆದಿದ್ದ ಜನರಿಗೆ ಮನೋರಂಜನೆ ನೀಡಿದ ಕುಸ್ತಿ ಸ್ಪರ್ಧೆ

ಮಹೇಶ್ ಇ, ಭೂಮನಹಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jul 03, 2023 | 4:44 PM

ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಹಿಳೆಯರಿಗೆ ಹಾಗೂ ಪುರುಷ ವಿಭಾಗದಲ್ಲಿ  ಕುಸ್ತಿ ಸ್ಪರ್ಧೆ ನಡೆದಿದ್ದು, ಜಗಜಟ್ಟಿಗಳ ಸೆಣೆಸಾಟ ಗಮನ ಸೆಳೆದರೆ, ಮಹಿಳಾ ಜಗಜಟ್ಟಿಗಳ ಕಾಳಗ ಕಣ್ಮನ ಸೆಳೆಯಿತು.

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದ ಹಳೆಯೂರು ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ಕುಸ್ತಿ ಸ್ಪರ್ಧೆ (Wrestling Competition) ಏರ್ಪಡಿಸಲಾಗಿತ್ತು. ಮಹಿಳೆಯರಿಗೆ ಹಾಗೂ ಪುರುಷ ವಿಭಾಗದಲ್ಲಿ  ಕುಸ್ತಿ ಸ್ಪರ್ಧೆ ನಡೆದಿದ್ದು, ಜಗಜಟ್ಟಿಗಳ ಸೆಣೆಸಾಟ ಗಮನ ಸೆಳೆದರೆ, ಮಹಿಳಾ ಜಗಜಟ್ಟಿಗಳ ಕಾಳಗ ಕಣ್ಮನ ಸೆಳೆಯಿತು. ಚಿತ್ರದುರ್ಗ, ಶಿವಮೊಗ್ಗ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಕುಸ್ತಿ ಪಟುಗಳು ಆಗಮಿಸಿದ್ದಾರೆ. ಐನೂರರಿಂದ 5 ಸಾವಿರದ ವರೆಗೂ ಬಹುಮಾನ ಇಡಲಾಗಿತ್ತು. ಕುಂಸ್ತಿ ಪಂದ್ಯಾವಳಿ ನೋಡಲು ಸಾವಿರಾರು ಮಂದಿ ಆಗಮಿಸಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.