ಗ್ಯಾರಂಟಿ ಯೋಜನೆಗಳನ್ನು ಉಲ್ಲೇಖಿಸಿ ಮತ್ತೊಮ್ಮೆ ಶಿವಕುಮಾರ್-ಸಿದ್ದರಾಮಯ್ಯರನ್ನು ಗೇಲಿ ಮಾಡಿದ ಬಸನಗೌಡ ಯತ್ನಾಳ್
ವಿಧಾನಸಭಾ ಚುನಾವಣೆಗೆ ಮೊದಲು ಸಿದ್ದರಾಮಯ್ಯ ‘ಹತ್ತು ಕೇಜಿ’ ಕೊಡುತ್ತೇನೆ ಅಂದಿದ್ದರು, ಯಾರಿಗಾದರೂ ಸಿಕ್ಕಿತಾ? ಅಂತ ಪ್ರಶ್ನಿಸಿದ ಯತ್ನಾಳ್; ಅಕ್ಕಿ ಬದಲು ಅವರು ಕೊಡುತ್ತಿರುವ ಹಣ ಅಬ್ಕಾರಿ ಇಲಾಖೆ ಮೂಲಕ ವಾಪಸ್ಸು ಸರ್ಕಾರದ ಖಜಾನೆಗೆ ಹೋಗುತ್ತಿದೆ, ಯಾಕೆಂದರೆ ಆ ಹಣವನ್ನು ಮನೆಯ ಗಂಡಸರು ಮದ್ಯಸೇವನೆಗೆ ಖರ್ಚು ಮಾಡುತ್ತಿದ್ದಾರೆ ಎಂದು ಯತ್ನಾಳ್ ಹೇಳಿದರು.
ರಾಯಚೂರು: ಜಿಲ್ಲೆಯ ಲಿಂಗಸೂಗೂರುನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಬಿಜೆಪಿ ಸಮಾವೇಶದಲ್ಲಿ (BJP convention) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಮತ ಯಾಚಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮತ್ತೊಮ್ಮೆ ಸಿದ್ದರಾಮಯ್ಯ ಸರ್ಕಾರದ (Siddaramaiah government) ಗ್ಯಾರಂಟಿ ಯೋಜನೆಗಳನ್ನು ಗೇಲಿ ಮಾಡಿದರು. ವಿಧಾನಸಭಾ ಚುನಾವಣೆಗೆ ಮೊದಲು ಸಿದ್ದರಾಮಯ್ಯ ‘ಹತ್ತು ಕೇಜಿ’ ಕೊಡುತ್ತೇನೆ ಅಂದಿದ್ದರು, ಯಾರಿಗಾದರೂ ಸಿಕ್ಕಿತಾ? ಅಂತ ಪ್ರಶ್ನಿಸಿದ ಯತ್ನಾಳ್; ಅಕ್ಕಿ ಬದಲು ಅವರು ಕೊಡುತ್ತಿರುವ ಹಣ ಅಬ್ಕಾರಿ ಇಲಾಖೆ ಮೂಲಕ ವಾಪಸ್ಸು ಸರ್ಕಾರದ ಖಜಾನೆಗೆ ಹೋಗುತ್ತಿದೆ, ಯಾಕೆಂದರೆ ಆ ಹಣವನ್ನು ಮನೆಯ ಗಂಡಸರು ಮದ್ಯಸೇವನೆಗೆ ಖರ್ಚು ಮಾಡುತ್ತಿದ್ದಾರೆ ಎಂದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಲ್ಲ ಭಾರತೀಯರಿಗೆ 32 ರೂ./ಕೇಜಿ ಅಕ್ಕಿ ಸಿಗುವ ಯೋಜನೆ ಜಾರಿ ಮಾಡಿದ್ದು ಅದರಿಂದ ಕೋಟ್ಯಾಂತರ ಜನಕ್ಕೆ ಸಹಾಯವಾಗುತ್ತಿದೆ ಎಂದು ಯತ್ನಾಳ್ ಹೇಳಿದರು. ಸಿದ್ದರಾಮಯ್ಯ ಸರ್ಕಾರ ತೆರಿಗೆ ಮೂಲಕ ಸಂಗ್ರಹವಾಗುವ ಹಣವನ್ನೆಲ್ಲ ಗ್ಯಾರಂಟಿ ಯೋಜನೆಗಳ ಮೇಲೆ ಸುರಿಯುತ್ತಿರುವುದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಯತ್ನಾಳ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಆಂಜನೇಯ ಅವಿವೇಕಿ, ಸಿದ್ದರಾಮಯ್ಯನವರನ್ನೇ ಪೂಜಿಸಲಿ: ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ