Loading video

ಸ್ಪೀಕರ್‌ ತಮ್ಮ ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್

|

Updated on: Mar 13, 2025 | 4:59 PM

ಕಾಡಿನಲ್ಲಿ ಪ್ರಾಣಿಗಳನ್ನು ಕಾಯುವ ಜನರಿಗೆ ಎಸ್ಸಿ, ಎಸ್ಟಿ ಹಣ ಬಳಸಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದರು. ಆಗ ಪ್ರತಿಕ್ರಿಯಿಸಿದ ಸ್ಫೀಕರ್ ಯುಟಿ ಖಾದರ್, ಅಲ್ಲಿ SC-ST ಸಮುದಾಯದವರಿದ್ದಾರೆ. ಅವರಿಗೆ ಕೊಟ್ಟಿದ್ದಾರೆಂದರು. ಬಳಿಕ ಮಧ್ಯ ಪ್ರವೇಶಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಕಾಡಿನಲ್ಲಿ ಏನು ಲಿಂಗಾಯತ, ದಲಿತ, ಬ್ರಾಹ್ಮಣ ಹುಲಿಗಳು ಇವೆಯಾ? ಎಂದು ಹುಲಿ ದಾಳಿ ಮಾಡುವ ರೀತಿ ಅನುಕರಣೆ ಮಾಡಿ ಸ್ಪೀಕರ್ ಕಾಲೆಳೆದರು.

ಬೆಂಗಳೂರು, (ಮಾರ್ಚ್​ 13): ಬಜೆಟ್​ ಮೇಲಿನ ಚರ್ಚೆ ವೇಳೆ ಹುಲಿ ಬಗ್ಗೆ ಸ್ಪೀಕರ್​ ಮತ್ತು ಯತ್ನಾಳ್​ ನಡುವೆ ಸ್ವಾರಸ್ಯಕರ ಚರ್ಚೆ ಆಯ್ತು. ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆ ವೇಳೆ ಎಸ್ಸಿ, ಎಸ್ಟಿ ಹಣ ಬೇರೆಯದ್ದಕ್ಕೆ ಬಳಕೆ ಮಾಡಿರುವ ಸಂಬಂಧ ವಿಕ್ಷದ ನಾಯಕರು ಪ್ರಸ್ತಾಪಿದರು. ಕಾಡಿನಲ್ಲಿ ಪ್ರಾಣಿಗಳನ್ನು ಕಾಯುವ ಜನರಿಗೆ ಎಸ್ಸಿ, ಎಸ್ಟಿ ಹಣ ಬಳಸಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದರು. ಆಗ ಪ್ರತಿಕ್ರಿಯಿಸಿದ ಸ್ಫೀಕರ್ ಯುಟಿ ಖಾದರ್, ಅಲ್ಲಿ SC-ST ಸಮುದಾಯದವರಿದ್ದಾರೆ. ಅವರಿಗೆ ಕೊಟ್ಟಿದ್ದಾರೆಂದರು. ಬಳಿಕ ಮಧ್ಯ ಪ್ರವೇಶಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಕಾಡಿನಲ್ಲಿ ಏನು ಲಿಂಗಾಯತ, ದಲಿತ, ಬ್ರಾಹ್ಮಣ ಹುಲಿಗಳು ಇವೆಯಾ? ಎಂದು ಹುಲಿ ದಾಳಿ ಮಾಡುವ ರೀತಿ ಅನುಕರಣೆ ಮಾಡಿ ಸ್ಪೀಕರ್ ಕಾಲೆಳೆದರು. ಈ ವೇಳೆ ಇಡೀ ಸದನ ನಗೆ ಗಡಲಲ್ಲಿ ತೇಲಿತು.

ಯತ್ನಾಳ್​ ಮಾತಿನಿಂದ ಸ್ಪೀಕರ್‌ ತಮ್ಮ ಮಾತನ್ನು ವಾಪಸ್ ಪಡೆಯುತ್ತೇನೆ ಎಂದರು. ಆದರೂ ಬಿಡದ ಯತ್ನಾಳ್, ತಮ್ಮ ಮಾತನ್ನು ಮುಂದುವರಿಸಿದರು. ಕೊನೆಗೆ ಶಾಸಕ ಯತ್ನಾಳ್ ಮಾತಿಗೆ ಸ್ಪೀಕರ್ ಯು.ಟಿ.ಖಾದರ್‌ ಕೈಮುಗಿದು ಸಾಕು ಎಂದರು.