Mysuru; ಬಿಜೆಪಿ ಶಾಸಕರು ಬುಧವಾರ ಸದನದಲ್ಲಿ ಗಲಾಟೆ ಸೃಷ್ಟಿಸಿದ್ದರ ಹಿಂದೆ ಮಹತ್ತರ ಕಾರಣಗಳಿವೆ: ಎಂ ಲಕ್ಷ್ಮಣ, ಕೆಪಿಸಿಸಿ ವಕ್ತಾರ

|

Updated on: Jul 20, 2023 | 3:02 PM

ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್ ಹುದ್ದೆಗಳನ್ನು ಮುಸ್ಲಿಂ ಸಮುದಾಯ ಮತ್ತು ದಲಿತ ಸಮುದಾಯವರು ನಿರ್ವಹಿಸುತ್ತಿರುವುದು ಸಹ ಅವರಿಗೆ ಪಥ್ಯವಾಗುತ್ತಿಲ್ಲ ಎಂದು ಲಕ್ಷ್ಮಣ್ ಹೇಳಿದರು.

ಮೈಸೂರು: ನಗರದಲ್ಲಿಂದು  ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ (M Laxman) ಬುಧವಾರದಂದು ಬಿಜೆಪಿ ಸದಸ್ಯರು ವಿಧಾನ ಸಭಾ ಅಧಿವೇಶನದಲ್ಲಿ ಗಲಾಟೆ ಮಾಡಿದ್ದರ ಹಿಂದೆ ಕೆಲ ಮಹತ್ತರ ಕಾರಣಗಳಿವೆ ಎಂದರು. ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ ನಿನ್ನೆ ತನ್ನ 4 ನೇ ಗ್ಯಾರಂಟಿ ಗೃಹ ಲಕ್ಷ್ಮಿ ಯೋಜನೆಯ (Gruha Lakshmi) ಪ್ರಕ್ರಿಯೆಯನ್ನು ಆರಂಭಿಸಿದೆ. ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಆಗಸ್ಟ್ ನಿಂದ ಹಣ ಜಮೆಯಾಲಾರಂಭಿಸುತ್ತದೆ, ಈ ಬೆಳವಣಿಗೆಯನ್ನು ಸಹಿಸಿಕೊಳ್ಳುವುದು ಬಿಜೆಪಿ ನಾಯಕರಿಗೆ ಸಾಧ್ಯವಾಗದೆ ಹತಾಷೆಯನ್ನು ಹಾಗೆ ವ್ಯಕ್ತಪಡಿಸಿದರು ಎಂದು ಲಕ್ಷ್ಮಣ್ ಹೇಳಿದರು. ಅದಲ್ಲದೆ, ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್ ಹುದ್ದೆಗಳಲ್ಲಿ ಕ್ರಮವಾಗಿ ಮುಸ್ಲಿಂ ಸಮುದಾಯದ ಯುಟಿ ಖಾದರ್ ಮತ್ತು ದಲಿತ ಸುಮುದಾಯವನ್ನು ಪ್ರತಿನಿಧಿಸುವ ರುದ್ರಪ್ಪ ಲಮಾಣಿ ಕೂತಿರುವುದು ಸಹ ಅವರಿಗೆ ಪಥ್ಯವಾಗುತ್ತಿಲ್ಲ ಎಂದು ಲಕ್ಷ್ಮಣ್ ಹೇಳಿದರು. ಬೆಂಗಳೂರಲ್ಲಿ ನಡೆದ ವಿರೋಧ ಪಕ್ಷಗಳ ಸಭೆಗೆ ಕೆಲರಾಜ್ಯಗಳ ಮುಖ್ಯಮಂತ್ರಿಗಳು ಸಹ ಬಂದಿದ್ದರು. ಅವರನ್ನು ಸ್ವಾಗತಿಸಲು ಹಿರಿಯ ಐಎಎಸ್ ಅಧಿಕಾರಿಗಳು ಹೋಗಿದ್ದು ಪ್ರೊಟೊಕಾಲ್ ನ ಭಾಗ, ಅವರು ಮುಖ್ಯಮಂತ್ರಿಗಳಾಗಿರುವುದರಿಂದ ರಾಜ್ಯದ ಅತಿಥಿಗಳಾಗುತ್ತಾರೆ, ಇಂಥ ಸಾಮಾನ್ಯ ವಿಷಯ ಕೂಡ ಬಿಜೆಪಿ ನಾಯಕರಿಗೆ ಹೊಳೆಯದಿರುವುದು ವಿಷಾದಕರ ಎಂದು ಕೆಪಿಸಿಸಿ ವಕ್ತಾರ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ