ರೈತ ಆತ್ಮಹತ್ಯೆ: ತಮ್ಮ ವಿರುದ್ಧ ದಾಖಲಾದ FIRಗೆ ತೇಜಸ್ವಿ ಸೂರ್ಯ ಸ್ಪಷ್ಟನೆ

|

Updated on: Nov 08, 2024 | 1:01 PM

ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬ ನನ್ನ ಸಂಪರ್ಕ ಮಾಡಿದೆ. ಆತ್ಮಹತ್ಯೆ ಮಾಡಿಕೊಂಡ ರೈತನ ಜಮೀನಿನ ಪಹಣಿಯಲ್ಲಿ ವಕ್ಫ್​ ಅಂತ ನಮೂದು ಆಗದೆ. ಬೇಕಿದ್ದರೆ ಪಹಣಿಯ ಪ್ರಿಂಟ್ ತೆಗೆದುಕೊಡುತ್ತೇನೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಹುಬ್ಬಳ್ಳಿ, ನವೆಂಬರ್​ 08: ಪಹಣಿ ಪತ್ರದಲ್ಲಿ ವಕ್ಫ್​ ಬೋರ್ಡ್​ (Waqf Board) ಅಂತ ಹೆಸರು ಬಂದಿದ್ದಕ್ಕೆನೇ ರೈತರೊಬ್ಬರು (Farmer) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಅವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಇದಕ್ಕೆ ಸಂಸದ ತೇಜಸ್ವಿ ಸೂರ್ಯ (Tejaswi Surya) ಸ್ಪಷ್ಟನೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬ ನನ್ನ ಸಂಪರ್ಕ ಮಾಡಿದೆ. ಪಹಣಿಯಲ್ಲಿ ವಕ್ಫ್​ ಅಂತ ನಮೂದು ಆಗಿದ್ದಕ್ಕೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಕುಟುಂಬಸ್ಥರು ನನಗೆ ಹೇಳಿದ್ದಾರೆ ಎಂದು ತಿಳಿಸಿದರು.

ಆತ್ಮಹತ್ಯೆ ಮಾಡಿಕೊಂಡ ರೈತನ ಜಮೀನಿನ ಪಹಣಿಯಲ್ಲಿ ವಕ್ಫ್​ ಅಂತ ನಮೂದು ಆಗಿದೆ. ಪಹಣಿಯ ಪ್ರಿಂಟ್ ತೆಗೆದುಕೊಡುತ್ತೇನೆ. ಈ ಕಾರಣಕ್ಕೆ ಮಗ ಆತ್ಮಹತ್ಯೆ ಮಾಡ್ಕೊಂಡಿದ್ದಾನೆಂದು ಅವರ ತಂದೆ ಹೇಳಿದ್ದಾರೆ. ಮಾಧ್ಯಮಗಳು ಕೂಡ ಅದನ್ನು ವರದಿ ಮಾಡಿವೆ. ಮಾಧ್ಯಮ ಸ್ವಾತಂತ್ರ್ಯ ಹತ್ತಿಕುವ ಕೆಲಸ ನಡೆಯುತ್ತಿದೆ. ಒತ್ತಡಕ್ಕೆ ಒಳಗಾಗಿ ಪೊಲೀಸರು ಕೇಸ್​​ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಿದರು.

ನಾನು ಜವಾಬ್ದಾರಿ ಸ್ಥಾನದಲ್ಲಿ ಇರೋದ್ರಿಂದ ಪೋಸ್ಟ್​​ ಡಿಲೀಟ್ ಮಾಡಿದೆ. ರಾಜ್ಯದಲ್ಲಿ ರೈತರ ಜಾಗ ಕಬಳಿಸಲು ವಕ್ಫ್​ ಬೋರ್ಡ್​ಗೆ ಬೆಂಬಲ. ವಕ್ಫ್​ ಬೋರ್ಡ್​​ನ​​ ಹಳೆಯ ತಪ್ಪುಗಳನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದರು.

ರೈತನ ಕುಟುಂಬಸ್ಥರು ಕೂಡ ಮಾಧ್ಯಮದ ಎದುರು ಮಾತಾಡಿದ್ದಾರೆ. ಮಾಧ್ಯಮಗಳಲ್ಲೂ ಕೂಡ ಈ ಸುದ್ದಿ ಪ್ರಸಾರವಾಗಿದೆ. ಕಾನೂನಿನ ಬಗ್ಗೆ ಗೌರವ ಇರೋದ್ರಿಂದ ಟ್ವೀಟ್​ ಡಿಲೀಟ್ ಮಾಡಿದೆ. ಪ್ರಿಯಾಂಕ್ ಖರ್ಗೆ ಶಾಸಕರಾದರೂ ಅವರಿಗೆ ಮಾಡಲು ಏನು ಕೆಲಸ ಇಲ್ಲ ಅನ್ಸುತ್ತೆ. ಹುಡುಕಿ ಹುಡುಕಿ ಎಫ್​ಐಆರ್​​ ದಾಖಲಾಗಿ. ರಾಜ್ಯದ ಜನರ ಬಳಿ ಸಚಿವ ಪ್ರಿಯಾಂಕ್​ ಖರ್ಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:42 pm, Fri, 8 November 24

Follow us on