Karnataka Assembly Polls: ಬಿಜೆಪಿಗೆ ಖಚಿತವಾಗಿ 108 ಸ್ಥಾನ ಸಿಗಲಿವೆ, 35 ಸ್ಥಾನಗಳಲ್ಲಿ ಗೆಲ್ಲುವ ಅವಕಾಶ 50-50ರಷ್ಟಿದೆ: ಮುರುಗೇಶ್ ನಿರಾಣಿ, ಸಚಿವ
ಜೆಡಿಎಸ್ ಜೊತೆ ಮೈತ್ರಿ ಸಾಧಿಸುವ ಪ್ರಮೇಯವೇ ಉದ್ಭವಿಸುವುದಿಲ್ಲ ಎಂದ ಸಚಿವರು ಅಂಥ ಸಂದರ್ಭವೇನಾದರೂ ಎದುರಾದರೆ ಪಕ್ಷದ ಮುಖಂಡರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರೊಂದಿಗೆ (BS Yediyurappa) ಮಾತುಕತೆ ನಡೆಸಿದ ಬಳಿಕ ಹೊರಬಂದ ಬಿಜೆಪಿ ನಾಯಕರಲ್ಲಿ ಹೆಚ್ಚಿನ ಆತ್ಮವಿಶ್ವಾಸ ಕಾಣಿಸಿತು. ಹೊರಗಡೆ ಕಾಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ ಮುರುಗೇಶ ನಿರಾಣಿ (Murugesh Nirani) ಅವರು ಬಿಜೆಪಿ ಖಚಿತವಾಗಿ 108 ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು 35 ಸ್ಥಾನಗಳಲ್ಲಿ ಗೆಲ್ಲುವ ಅವಕಾಶ ಶೇಕಡ 50 ರಷ್ಟಿದೆ, ಹಾಗಾಗಿ ತಮ್ಮ ಬುಟ್ಟಿಗೆ 120ಕ್ಕಿಂತ ಹೆಚ್ಚು ಸ್ಥಾನಗಳು ಗ್ಯಾರಂಟಿ ಎಂದು ಹೇಳಿದರು. ಜೆಡಿಎಸ್ ಜೊತೆ ಮೈತ್ರಿ (alliance) ಸಾಧಿಸುವ ಪ್ರಮೇಯವೇ ಉದ್ಭವಿಸುವುದಿಲ್ಲ ಎಂದ ಸಚಿವರು ಅಂಥ ಸಂದರ್ಭವೇನಾದರೂ ಎದುರಾದರೆ ಪಕ್ಷದ ಮುಖಂಡರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ