ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಹುದ್ದೆಗಳೆರಡೂ ಬಿಜೆಪಿ ತೆಕ್ಕೆಗೆ, ಪಕ್ಷಕ್ಕೆ ಮೊದಲ ಬಾರಿ ಸ್ವತಂತ್ರವಾಗಿ ಅಧಿಕಾರ!

|

Updated on: Mar 23, 2023 | 5:48 PM

ಪಕ್ಷದ ವಿಶಾಲ್ ದರ್ಗಿ 33 ಪಡೆದ ಮೇಯರ್ ಆಗಿ ಅಯ್ಕೆಯಾದರೆ ಅಷ್ಟೇ ಸಂಖ್ಯೆಯ ಮತ ಗಿಟ್ಟಿಸಿದ ಅದೇ ಪಕ್ಷದ ಶಿವಾನಂದ ಪಿಸ್ತಿ ಉಪಮೇಯರ್ ಹುದ್ದೆಗೆ ಆಯ್ಕೆಯಾದರು.

ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಮುಖ ಜಿಲ್ಲೆಯಾಗಿರುವ ಕಲಬುರಗಿ ನಗರ ಪಾಲಿಕೆ (Kalaburagi Mahanagara Palike) ಬಿಜೆಪಿ ಪಾಲಾಗಿದೆ. ಮೊದಲ ಬಾರಿಗೆ ಯಾವುದೇ ಪಕ್ಷ ಅಥವಾ ಸ್ವತಂತ್ರ ಕಾರ್ಪೊರೇಟರ್ ಗಳ ನೆರವಿಲ್ಲದೆ ಬಿಜೆಪಿ ಪಾಲಿಕೆಯ ಗದ್ದುಗೆಗೇರಿದೆ. ಪಾಲಿಕೆ ಮೇಯರ್ ಮತ್ತು ಉಪಮೇಯರ್ ಹುದ್ದೆಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷದ ವಿಶಾಲ್ ದರ್ಗಿ (Vishal Dargi) 33 ಪಡೆದ ಮೇಯರ್ ಆಗಿ ಅಯ್ಕೆಯಾದರೆ ಅಷ್ಟೇ ಸಂಖ್ಯೆಯ ಮತ ಗಿಟ್ಟಿಸಿದ ಅದೇ ಪಕ್ಷದ ಶಿವಾನಂದ ಪಿಸ್ತಿ (Shivanand Pisti) ಉಪಮೇಯರ್ ಹುದ್ದೆಗೆ ಆಯ್ಕೆಯಾದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 23, 2023 05:48 PM