ಹಾಸನ: ಗುರವಾರದಂದು ಹೃದಯಘಾತದಿಂದ ನಿಧನ ಹೊಂದಿ ಜೈನ ಧರ್ಮ ಸ್ವಾಮೀಜಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ (Sri Charukeerthi Bhattaraka Swamiji) ಅಂತಿಮ ಸಂಸ್ಕಾರವನ್ನು ಜಿಲ್ಲೆಯ ಚಂದ್ರಗಿರಿ ಬೆಟ್ಟದಲ್ಲಿ (Chandragiri Betta) ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದ್ದು ಅದಕ್ಕಾಗಿ ಸಿದ್ಧತೆ ನಡೆದಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅಂತಿಮ ವಿಧಿವಧಾನಗಳನ್ನು ಜೈನ ಧರ್ಮದ (Jainism) ಪದ್ಧತಿಯಂತೆ ಅವರ ಶಿಷ್ಯವೃಂದ ಎರಡು ಜೈನ ಬಸದಿಗಳ ನಡುವೆ ನೆರವೇರಿಸುತ್ತದೆ. ಒಕ್ಕಲಿಗ ಸಮುದಾಯದ ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು ಮತ್ತು ಬೇರೆ ಬೇರೆ ಸಮುದಾಯಗಳ ಮಠಾಧೀಶರು, ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜೀಯವರ ನಿಧನಕ್ಕೆ ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ