ಲಖನೌನಲ್ಲಿ ಮತಗಳ ಎಣಿಕೆ ಆರಂಭಗೊಳ್ಳುವ ಮೊದಲೇ ಬಿಜೆಪಿ ಕಾರ್ಯಕರ್ತರು ಔತಣ ಸಿದ್ಧಪಡಿಸುತ್ತಿದ್ದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 10, 2022 | 10:27 PM

ಯೋಗಿ ಆದಿತ್ಯನಾಥ ಎರಡನೇ ಬಾರಿಗೆ ಯುಪಿಯ ಮುಖ್ಯಮಂತ್ರಿಯಾಗಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಕಳೆದ ಬಾರಿಯಂತೆಯೇ ಪ್ರಚಂಡ ಗೆಲುವು ದಾಖಲಿಸುವ ಬಹಳ ಜನರಿಗೆ ಅನುಮಾನವಿರಲಿಲ್ಲ. ಎಕ್ಸಿಟ್ ಪೋಲ್ ಮತ್ತು ಒಪಿನಿಯನ್ ಪೋಲ್ ಸಹ ಅದನ್ನೇ ಹೇಳಿದ್ದವು.

ಐದು ರಾಜ್ಯಗಳ ವಿದಾನ ಸಭೆಗಳಿಗೆ ನಡೆದ ಚುನಾವಣೆಗಳ ಫಲಿತಾಂಶಗಳೂ ಬಂದಾಗಿದೆ. ಪಂಜಾಬ್ ಹೊರತುಪಡಿಸಿ ಮಿಕ್ಕಿದ 4 ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಪಂಜಾಬ್ ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಅದರ ನಾಯಕರ ಒಳಜಗಳಗಳು, ವಿನಾಕಾರಣ ಪಿಸಿಸಿ (PCC) ಅಧ್ಯಕ್ಷ ನವಜೋತ್ ಸಿಂಗ ಸಿಧು (Navjot Singh Sidhu) ಮೇಲೆ ಹೈಕಮಾಂಡ್ ಇಟ್ಟಿದ್ದ ವಿಶ್ವಾಸ ಮತ್ತು ಅದರ ಜೊತೆಗೆ ಅತಿಯೆನಿಸಿದ ಆತ್ಮವಿಶ್ವಾಸದಿಂದಾಗಿ ನೆಲಕಚ್ಚಿದೆ. ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಆಪ್ ಕಳೆದ ಬಾರಿಯ ಚುನಾವಣೆಯಲ್ಲೇ ಭರವಸೆ ಮೂಡಿಸಿತ್ತು. ಆದರೆ ಕಾಂಗ್ರೆಸ್ ಅದನ್ನು ನಿರ್ಲಕ್ಷ್ಯ ಮಾಡಿತು. ಕೇಜ್ರಿವಾಲ್ ಅವರನ್ನು ಭಯೋತ್ಪಾದಕ ಜೊತೆ ನಂಟಿರುವ ವ್ಯಕ್ತಿ ಎಂದು ಬಿಂಬಿಸಲು ಪ್ರಯತ್ನಿಸಿದ್ದು ಅದಕ್ಕೆ ತಿರುಗುಬಾಣವಾಯಿತು. ಸರಿ ಬಿಡಿ, ನಾವಿಲ್ಲಿ ಮಾತಾಡಬೇಕಿರುವುದು ಉತ್ತರ ಪ್ರದೇಶದ ಬಗ್ಗೆ.

ಯೋಗಿ ಆದಿತ್ಯನಾಥ ಎರಡನೇ ಬಾರಿಗೆ ಯುಪಿಯ ಮುಖ್ಯಮಂತ್ರಿಯಾಗಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಕಳೆದ ಬಾರಿಯಂತೆಯೇ ಪ್ರಚಂಡ ಗೆಲುವು ದಾಖಲಿಸುವ ಬಹಳ ಜನರಿಗೆ ಅನುಮಾನವಿರಲಿಲ್ಲ. ಎಕ್ಸಿಟ್ ಪೋಲ್ ಮತ್ತು ಒಪಿನಿಯನ್ ಪೋಲ್ ಸಹ ಅದನ್ನೇ ಹೇಳಿದ್ದವು.

ಹಾಗಾಗೇ ಗುರುವಾರದಂದು ಲಖನೌ ನಗರದ ಬಿಜೆಪಿ ಕಚೇರಿಗಳಲ್ಲಿ ಕಾರ್ಯಕರ್ತರು ಮತ ಎಣಿಕೆ ಕಾರ್ಯ ಶುರುವಾಗುವ ಮೊದಲೇ ಔತಣ ತಯಾರಿಸುವುದರಲ್ಲಿ ತೊಡಗಿದ್ದರು. ಬೆಳಗಿನ ಸಮಯದಲ್ಲೇ ಬಗೆಬಗೆಯ ಭಕ್ಷ್ಯಗಳು ತಯಾರಾಗುತ್ತಿರುವುದನ್ನು ಈ ವಿಡಿಯೋನಲ್ಲಿ ನೋಡಬಹುದು.

ರಾಜ್ಯದ ಬಿಜೆಪಿ ಕಾರ್ಯಕರ್ತರಿಗೆ ತಮ್ಮ ಪಕ್ಷ ಪುನಃ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿರಲಿಲ್ಲ ಅನ್ನೋದು ಇದರಿಂದ ಸ್ಪಷ್ಟವಾಗುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಹಾಗೂ ಪಕ್ಷದ ಮೇಲೆ ಉತ್ತರ ಪ್ರದೇಶದ ಜನ ವಿಶ್ವಾಸವಿರಿಸಿ ವೋಟು ಮಾಡಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ:  ನಾಗತ್ತೆ ಮನೆಯಲ್ಲಿ ಭಾವುಕರಾದ ರಾಘವೇಂದ್ರ ರಾಜ್​ಕುಮಾರ್​-ಮಂಗಳಾ ದಂಪತಿ; ಇಲ್ಲಿದೆ ವಿಡಿಯೋ