ಸಂಸದ ಡಿಕೆ ಸುರೇಶ್ ಗೂಂಡಾ ವರ್ತನೆ ಖಂಡಿಸಿ ಬೆಂಗಳೂರಲ್ಲಿ ಪ್ರತಿಭಟನೆ ನಡೆಸಿದರು ಬಿಜೆಪಿ ಕಾರ್ಯಕರ್ತರು
ಪ್ರತಿಭಟನೆ ನಡೆಯುವಾಗ ಮಾತಾಡಿದ ಪಕ್ಷದ ಹಿರಿಯ ನಾಯಕ ರವಿಕುಮಾರ್ ಅವರು, ಡಿಕೆ ಸಹೋದರರು ಕುಖ್ಯಾತ ರೌಡಿ ಕೊತ್ವಾಲ ರಾಮಚಂದ್ರನ ಶಿಷ್ಯರಾಗಿದ್ದು ಅವರ ಗೂಂಡಾ ವರ್ತನೆಯನ್ನು ಸಹಿಸುವುದು ಸಾಧ್ಯವಿಲ್ಲ, ತಮ್ಮ ಪಕ್ಷ ಅದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು
ಮೇಕೆದಾಟು ಯೋಜನೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಜನೆವರಿ 9ರಿಂದ ಪಾದೆಯಾತ್ರೆ ನಡೆಸಲು ನಿರ್ಧರಿಸಿದ್ದು ಅದು ಆರಂಭವಾಗುವ ಮೊದಲೇ ಜೋರಾದ ಚರ್ಚೆ ಶುರುವಿಟ್ಟುಕೊಂಡಿದೆ. ತಮ್ಮ ನಿರ್ಧಾರವವನ್ನು ಆಡಳಿತರೂಢ ಬಿಜೆಪಿ ಕಟುವಾಗಿ ಟೀಕಿಸುತ್ತಿರುವುದು ಕಾಂಗ್ರೆಸ್ ನಾಯಕರಿಗೆ ಕೋಪ ತರಿಸುತ್ತಿದೆ. ಇದುವರೆಗೆ ಬರೀ ಮಾತಿಗೆ, ಟ್ವೀಟ್ಗಳಿಗೆ ಸೀಮಿತವಾಗಿದ್ದ ಇವರ ಜಗಳ ಸೋಮವಾರದಂದು ಕೈ-ಕೈ ಮಿಲಾಯಿಸುವ ಹಂತಕ್ಕೆ ಬಂದಿದೆ. ರಾಮನಗರದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಸಚಿವ ಡಾ ಸಿ ಅರ್ ಅಶ್ವತ್ಥ ನಾರಾಯಣ ಮತ್ತು ಕಾಂಗ್ರೆಸ್ ಪಕ್ಷದ ಸಂಸದ ಡಿಕೆ ಸುರೇಶ್ ನಡುವೆ ವೇದಿಕೆ ಮೇಲೆ ಮತ್ತು ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ತೀಕ್ಷ್ಣ ಸ್ವರೂಪದ ವಾಗ್ವಾದ ನಡೆಯಿತು. ಸಾರ್ವಜನಿಕರ ಮುಂದೆ ಇಂಥದೊಂದು ಸನ್ನಿವೇಶ ಸೃಷ್ಟಿಯಾಗಿರುವುದು ಕನ್ನಡಿಗರ ಬಗ್ಗೆ ಬೇರೆ ರಾಜ್ಯದವರು ಅಸಹ್ಯ ಭಾವ ತಳೆಯುವಂತೆ ಮಾಡಿದೆ.
ಸುರೇಶ್ ಅವರ ಗೂಂಡಾ ವರ್ತನೆಯನ್ನು ಸಹಿಸುವುದು ಸಾಧ್ಯವಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಸೋಮವಾರದಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಆ ಸಂದರ್ಭದಲ್ಲಿ ಮಾತಾಡಿದ ಪಕ್ಷದ ಹಿರಿಯ ನಾಯಕ ರವಿಕುಮಾರ್ ಅವರು, ಡಿಕೆ ಸಹೋದರರು ಕುಖ್ಯಾತ ರೌಡಿ ಕೊತ್ವಾಲ ರಾಮಚಂದ್ರನ ಶಿಷ್ಯರಾಗಿದ್ದು ಅವರ ಗೂಂಡಾ ವರ್ತನೆಯನ್ನು ಸಹಿಸುವುದು ಸಾಧ್ಯವಿಲ್ಲ, ತಮ್ಮ ಪಕ್ಷ ಅದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಸಾಕಷ್ಟು ಸಂಖ್ಯೆಯ ಮಹಿಳೆಯರು ಸಹ ಭಾಗವಹಿಸಿದ್ದರು.
ಪ್ರತಿಭಟನೆಕಾರರು ಸುರೇಶ್ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಏತನ್ಮಧ್ಯೆ ತಮ್ಮ ವರ್ತನೆಗೆ ವಿಷಾದ ವ್ಯಕ್ತಪಡಿಸಿರುವ ಸುರೇಶ್ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕ್ಷಮೆ ಕೋರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಹೊಸ ವರ್ಷದಂದು ನಾಡದೇವತೆ ಚಾಮುಂಡೇಶ್ವರಿಯ ಸನ್ನಿಧಾನಕ್ಕೆ ಅಭಿಮಾನಿಗಳೊಂದಿಗೆ ಆಗಮಿಸಿದ ಅಪ್ಪು; ವಿಡಿಯೋ ಇಲ್ಲಿದೆ