Metro Pillar Tragedy: ಸಂತ್ರಸ್ತ ಕುಟುಂಬಕ್ಕೆ ರೂ. 20 ಲಕ್ಷ ಪರಿಹಾರ ಘೋಷಿಸಿದ ಬಿ ಎಮ್ ಆರ್ ಸಿ ಎಲ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 10, 2023 | 4:43 PM

ಅಂಜುಮ್ ಪರ್ವೇಜ್ ಅವರು ನೆರೆದಿದ್ದ ಪತ್ರಕರ್ತರೊಡನೆ ಮಾತಾಡಿ ಮಹಿಳೆಯ ಕುಟುಂಬಕ್ಕೆ ಸಂಸ್ಥೆಯ ವತಿಯಿಂದ ರೂ. 20 ಲಕ್ಷಗಳ ಪರಿಹಾರ ಧನ ನೀಡಲಾಗುವುದು ಅಂತ ಹೇಳಿದರು.

ಬೆಂಗಳೂರಲ್ಲಿಂದು ಕಲ್ಯಾಣನಗರ-ಹೆಬ್ಬಾಳ್ ರಿಂಗ್ ರೋಡ್ ಹಾದಹೋಗುವ ಹೆಚ್ ಬಿ ಆರ್ ಲೇಔಟ್ (BHR Layout) ಬಳಿ ಮೆಟ್ರೋ ಪಿಲ್ಲರೊಂದು ಕುಸಿದು ದೊಡ್ಡ ದುರಂತ ಸಂಭವಿಸಿದೆ. ಸ್ಕೂಟರೊಂದರಲ್ಲಿ ಪತಿಯೊಂದಿಗೆ ತೆರಳುತ್ತಿದ್ದ ಮಹಿಳೆ ಮತ್ತು ಅವರ ಮಗುವಿನ ಮೇಲೆ ಪಿಲ್ಲರ್ ಕುಸಿದುಬಿದ್ದಿದ್ದರಿಂದ ಅವರ ಸಾವು ಸಂಭವಿಸಿದೆ. ಸ್ಥಳಕ್ಕೆ ಭೇಟಿ ನೀಡಿದ ಬಿಎಮ್ ಆರ್ ಸಿಎಲ್ (BMRCL) ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ (Anjum Parvez) ಅವರು ನೆರೆದಿದ್ದ ಪತ್ರಕರ್ತರೊಡನೆ ಮಾತಾಡಿ ಮಹಿಳೆಯ ಕುಟುಂಬಕ್ಕೆ ಸಂಸ್ಥೆಯ ವತಿಯಿಂದ ರೂ. 20 ಲಕ್ಷಗಳ ಪರಿಹಾರ ಧನ ನೀಡಲಾಗುವುದು ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ