Loading video

Gujarat Plane Crash: ದೇಹಗಳು ಸುಟ್ಟು ಕರಕಲಾಗಿರುವುದರಿಂದ ಗುರುತಿಸುವುದು ಸಂಬಂಧಿಕರಿಗೆ ಸಾಧ್ಯವಾಗುತ್ತಿಲ್ಲ

Updated on: Jun 13, 2025 | 2:30 PM

ಸತ್ತವರಲ್ಲಿ 59ಜನ ವಿದೇಶಿಯರಿರುವ ಕಾರಣ ಅವರ ಕುಟುಂಬಸ್ಥರು ಅಹಮದಾಬಾದ್ ಬರುವುದು ತಡವಾಗುತ್ತಿದೆ. ಏತನ್ಮಧ್ಯೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಮಾನ ದುರಂತ ನಡೆದ ಸ್ಥಳ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳೊಂದಿಗೆ ಮತ್ತು ಮೃತರ ಸಂಬಂಧಿಕರೊಂದಿಗೆ ಮಾತಾಡಿ ಸಾಂತ್ವನ ಹೇಳಿದ್ದಾರೆ ಮತ್ತು ವಿಮಾನ ಪತನಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟವರೊಂದಿಗೆ ಸಭೆಯನ್ನು ಸಹ ನಡೆಸಿದ್ದಾರೆ.

ಅಹ್ಮದಾಬಾದ್, ಜೂನ್ 13: ನಿನ್ನೆ ನಡೆದ ವಿಮಾನ ದುರಂತದಲ್ಲಿ ಬಲಿಯಾದವರ ದೇಹಗಳು ಯಾವಮಟ್ಟಿಗೆ ಸುಟ್ಟುಕರಕಲಾಗಿವೆ ಎಂದರೆ ಅವುಗಳನ್ನು ಗುರುತಿಸುವುದು ಅಹಮದಾಬಾದ್ ಸಿವಿಲ್ ಆಸ್ಪತ್ರೆ ಸಿಬ್ಬಂದಿಗೆ ದುಸ್ಸಾಧ್ಯವಾಗಿದೆ. ಗಾಯಾಳುಗಳನ್ನು ಇಲ್ಲಿ ದಾಖಲಿಸಲಾಗಿದೆ ಮತ್ತು ಮೃತದೇಹಗಳನ್ನು ಸಹ ಇಲ್ಲೇ ಇಡಲಾಗಿದೆ. 241 ದೇಹಗಳ ಪೈಕಿ ಕಡಿಮೆ ಪ್ರಮಾಣದಲ್ಲಿ ಸುಟ್ಟಿದ್ದ ದೇಹಗಳನ್ನು ಗುರುತಿಸಿ ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಉಳಿದ 237 ದೇಹಗಳ ಕುಟುಂಬಸ್ಥರನ್ನು ಆಸ್ಪತ್ರೆಯ ಸಿಬ್ಬಂದಿ ಸಂಪರ್ಕಿಸಿದ್ದು ಅವರೆಲ್ಲ ಬಂದು ಡಿಎನ್​ಎ ಸ್ಯಾಂಪಲ್​ಗಳನ್ನು ನೀಡುತ್ತಿದ್ದಾರೆ. ಅವರು ನೀಡುವ ಸ್ಯಾಂಪಲ್​ಗಳನ್ನು ಮೃತರ ದೇಹಗಳ ಡಿಎನ್​ಎ ಜೊತೆ ಟೆಸ್ಟ್ ಮಾಡಿ ಮ್ಯಾಚ್ ಆದ ದೇಹಗಳನ್ನು ಹಸ್ತಾಂತರಿಸುವ ಪ್ರಕ್ರಿಯೆ ಆರಂಭಿಸಲಾಗುವುದು.

ಇದನ್ನೂ ಓದಿ:   ವಿಮಾನ ದುರಂತ ಘಟನೆ ಹೃದಯವಿದ್ರಾವಕ: ಅಹಮದಾಬಾದ್ ಭೇಟಿ ಬಳಿಕ ಪ್ರಧಾನಿ ಮೋದಿ ಸಂದೇಶ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ