ಅಣ್ಣಾವ್ರ ಸಿನಿಮಾದ ಹಾಡು ಹಾಡಿದ ಬಾಲಿವುಡ್ ಸ್ಟಾರ್ ನಟ: ವಿಡಿಯೋ ನೋಡಿ

Updated on: Jun 20, 2025 | 4:31 PM

Dr Rajkumar: ಹಿಂದಿ ಸಿನಿಮಾ ನಟರುಗಳಿಗೆ ಡಾ ರಾಜ್​​ಕುಮಾರ್ ಅವರ ಬಗ್ಗೆ ವಿಪರೀತ ಗೌರವ, ಪ್ರೀತಿ ಇತ್ತು. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಒಂದು ಕಾಲದ ಬಾಲಿವುಡ್ ಸ್ಟಾರ್ ನಟ ಗೋವಿಂದ, ರಾಜ್​​ಕುಮಾರ್ ಅವರ ಮೇಲಿನ ಗೌರವವನ್ನು ವ್ಯಕ್ತಪಡಿಸಿದರು. ಇದರ ಜೊತೆಗೆ ರಾಜ್​​ಕುಮಾರ್ ಅವರ ಸಿನಿಮಾದ ಕನ್ನಡ ಹಾಡೊಂದನ್ನು ಸುಶ್ರಾವ್ಯವಾಗಿ ಹಾಡಿದರು. ವಿಡಿಯೋ ಇಲ್ಲಿದೆ.

ಡಾ ರಾಜ್​​ಕುಮಾರ್ (Dr Rajkumar) ಎಂದರೆ ದಕ್ಷಿಣ ಭಾರತದ ನಟರಷ್ಟೆ ಅಲ್ಲ ಹಿಂದಿ ನಟರಿಗೂ ಅಪಾರ ಗೌರವ ಮತ್ತು ಪ್ರೀತಿ. ಅಮಿತಾಬ್ ಬಚ್ಚನ್ ಸಹ ಅಣ್ಣಾವ್ರಿಗೆ ಅಪಾರ ಗೌರವ ನೀಡುತ್ತಿದ್ದರು. ಆಗಿನ ಸ್ಟಾರ್ ನಟರಾದ ಗೋವಿಂದ, ಶತ್ರುಘ್ನ ಸಿನ್ಹಾ ಇನ್ನೂ ಹಲವರು ಅದೇ ಸಾಲಿಗೆ ಸೇರುವವರು. ಇತ್ತೀಚೆಗೆ ನಟ ಗೋವಿಂದ ಅವರು ಬೆಂಗಳೂರಿಗೆ ಬಂದಿದ್ದರು. ಈ ಸಮಯದಲ್ಲಿ ಮಾಧ್ಯಮದವರೊಟ್ಟಿಗೆ ತಮ್ಮ ಹಾಗೂ ಕರ್ನಾಟಕದ ನಡುವಿನ ಬಂಧದ ಬಗ್ಗೆ ಮಾತನಾಡುತ್ತಾ, ತಮಗೆ ರಾಜ್​​ಕುಮಾರ್ ಅವರ ಮೇಲಿರುವ ಗೌರವ ವ್ಯಕ್ತಪಡಿಸಿದರು. ಜೊತೆಗೆ, ಕನ್ನಡ ಹಾಡನ್ನು ಸಹ ಹಾಡಿದರು. ಇಲ್ಲಿದೆ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More