‘ಬಾಸ್’ ಸಿನಿಮಾಗೆ ದರ್ಶನ್ ಲಾಯರ್ ನೋಟಿಸ್: ನಿರ್ದೇಶಕರ ಖಡಕ್ ಪ್ರತಿಕ್ರಿಯೆ

Edited By:

Updated on: Mar 16, 2026 | 8:10 PM

ತನುಷ್ ಶಿವಣ್ಣ ನಟನೆಯ ‘ಬಾಸ್’ ಚಿತ್ರಕ್ಕೆ ವಿ. ಲವ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಕಥೆಗೂ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೂ ಸಾಮ್ಯತೆ ಇದೆ ಎಂಬ ಆರೋಪ ಕೇಳಿಬಂದಿದೆ. ಈ ಚಿತ್ರಕ್ಕೆ ಸೆನ್ಸಾರ್ ನೀಡಬಾರದು ಎಂದು ದರ್ಶನ್ ಪರ ವಕೀಲರು ನೋಟಿಸ್ ನೀಡಿದ್ದಾರೆ. ಆ ಬಗ್ಗೆ ನಿರ್ದೇಶಕರು ಪ್ರತಿಕ್ರಿಯೆ ನೀಡಿದ್ದಾರೆ.

ತನುಷ್ ಶಿವಣ್ಣ ನಟನೆಯ ‘ಬಾಸ್’ ಸಿನಿಮಾಗೆ (Boss Movie) ವಿ. ಲವ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಕಥೆಗೂ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೂ ಸಾಮ್ಯತೆ ಇದೆ ಎಂಬ ಆರೋಪ ಕೇಳಿಬಂದಿದೆ. ಈ ಚಿತ್ರಕ್ಕೆ ಸೆನ್ಸಾರ್ ನೀಡಬಾರದು ಎಂದು ದರ್ಶನ್ (Darshan) ಪರ ವಕೀಲರು ನೋಟಿಸ್ ನೀಡಿದ್ದಾರೆ. ಆ ಬಗ್ಗೆ ನಿರ್ದೇಶಕ ಲವ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ನನಗೆ ಯಾವುದೇ ನೋಟಿಸ್ ಬಂದಿಲ್ಲ. 3-4 ಜನರು ನನಗೆ ಬೆದರಿಕೆ ಕರೆ ಮಾಡಿದ್ದಾರೆ. ನಾನು ಅದನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ದರ್ಶನ್ ಅವರ ರಿಯಲ್ ಸ್ಟೋರಿ ಇಟ್ಟುಕೊಂಡು ನಾವು ಸಿನಿಮಾ ಮಾಡಿಲ್ಲ. ರೇಣುಕಾಸ್ವಾಮಿ ಘಟನೆ ಕೂಡ ಈ ಸಿನಿಮಾದಲ್ಲಿ ಇಲ್ಲ. ಕಾಕತಾಳೀಯವಾಗಿ ಹೋಲಿಕೆ ಆಗಿರಬಹುದು ಅಷ್ಟೇ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗ ಆ ಘಟನೆ ಇಟ್ಟುಕೊಂಡು ನಾವು ಸಿನಿಮಾ ಮಾಡೋಕೆ ಆಗಲ್ಲ. ವಕೀಲನಾಗಿ ನನಗೆ ಅದು ಗೊತ್ತು. ನಮಗೆ ನೋಟಿಸ್ ಬಂದರೆ ಅದಕ್ಕೆ ಉತ್ತರ ನೀಡುತ್ತೇವೆ’ ಎಂದು ಲವ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಂಗಳ ರಾಜ್

ಮಂಗಳ ರಾಜ್ ಮೂಲತಃ ಮಧುಗಿರಿ ಬಳಿಯ ರತ್ನಗಿರಿ ರಂಗಾಪುರದವರು. ಇವರು ಸುದ್ದಿ ಮಧ್ಯಮಕ್ಕೆ ಕಾಲಿಟ್ಟು 13 ವರ್ಷಗಳಾಗಿವೆ. ಈಟಿವಿಯಲ್ಲಿ ಇಂಟರ್​ನ್​ಶಿಪ್​ , ಮಧ್ಯಮದ ಅ, ಆ ಇ ಈ ಕಲಿತಿದ್ದು ಕಸ್ತೂರಿ ನ್ಯೂಸ್ 24 ನಲ್ಲಿ ನಂತ್ರ ರಾಜ್ ನ್ಯೂಸ್, ದಿಗ್ವಿಜಯ ನ್ಯೂಸ್ ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. 2021ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮುಂದುವರಿಸಿದ್ದಾರೆ. ಸಿನಿಮಾ ಅಂದ್ರೆ ಬಾಲ್ಯದಿಂದಲೂ ಹುಚ್ಚು. ಅರಸಿ ಬಂದಿದ್ದು ಸಿನಿಮಾ ಜರ್ನಲಿಸ್ಟ್ ಕೆಲಸ. ಸಿನಿಮಾ ಸುದ್ದಿಗಳ ಕವರೇಜ್, ಸಿನಿಮಾ ಹಾಗೂ ಸಿನಿಮಾ ಮಂದಿಯ ವಿವಾದಗಳು, ವಿಮರ್ಶೆ, ಸಿನಿಮಾದವರ ಸಾವು ನೋವು ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವುಗಳ ವರದಿಗಾರಿಕೆ ಇವರ ಕಾಯಕ. ಸಿನಿಮಾ ನೋಡುವುದೇ ಎಲ್ಲಾ ಆಸಕ್ತಿಗಳಿಗಿಂತ ಹೆಚ್ಚು ಆಸಕ್ತಿ.

Read More