ಪೊಲೀಸ್ ಠಾಣೆಯಲ್ಲಿ ಬಾಲಕ, ಆತನ ಅಜ್ಜಿಯನ್ನು ಮನಬಂದಂತೆ ಥಳಿಸಿದ ಪೊಲೀಸರು
ಮಧ್ಯಪ್ರದೇಶದ ರೈಲ್ವೇ ಪೊಲೀಸ್ ಠಾಣೆಯೊಳಗೆ 15 ವರ್ಷದ ಬಾಲಕ ಮತ್ತು ಆತನ ಅಜ್ಜಿಯನ್ನು ಅಧಿಕಾರಿಗಳು ಥಳಿಸಿದ ವಿಡಿಯೋವೊಂದು ಹೊರಬಿದ್ದಿದ್ದು, ಕೋಲಾಹಲ ಎಬ್ಬಿಸಿದೆ. ವಿವಾದದ ನಡುವೆಯೇ ಓರ್ವ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.

ಜಬಲ್‌ಪುರದ ಕಟ್ನಿ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ನಿಲ್ದಾಣದ ಉಸ್ತುವಾರಿ ಅಧಿಕಾರಿ ಅರುಣಾ ವಗಾನೆ, ಮಹಿಳೆ ಕುಸುಮ್ ವಂಸ್ಕರ್‌ಗೆ ಕೋಲಿನಿಂದ ಹೊಡೆಯುವುದಲ್ಲದೆ ಒದೆಯುವುದನ್ನು ವಿಡಿಯೋದಲ್ಲಿ ಕಾಣಬಹುದು. ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು, ವಿವಾದದ ಬೆನ್ನಲ್ಲೇ ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos