ಹುಬ್ಭಳ್ಳಿ ವಾಟ್ಸ್ಯಾಪ್ ಪೋಸ್ಟ್ ಖ್ಯಾತಿಯ ಪಿಯು ವಿದ್ಯಾರ್ಥಿ ಶುಕ್ರವಾರ ಪೊಲೀಸರೊಂದಿಗೆ ಬಂದು ಪರೀಕ್ಷೆ ಬರೆದ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 22, 2022 | 4:21 PM

ಜೈಲಿನಲ್ಲಿದ್ದುಕೊಂಡು ಓದಿ ಪರೀಕ್ಷೆ ಬರೆಯಲು ತಯಾರಾಗುವ ಸ್ಥಿತಿ ಅವನಿಗೆ ಎದುರಾಗಿದೆ. ಪೊಲೀಸ ವ್ಯಾನಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದು ಪುನಃ ಜೈಲಿಗೆ ವಾಪಸ್ಸು ಹೋಗುತ್ತಿದ್ದಾನೆ. ಯಾವುದೇ ವಿದ್ಯಾರ್ಥಿ ಮತ್ತು ಪಾಲಕರು ಇಂಥ ಸ್ಥಿತಿಯ ಬಗ್ಗೆ ಯೋಚನೆಯನ್ನೂ ಮಾಡಲಾರರು.

ಹುಬ್ಬಳ್ಳಿ:  ಈ ವಿದ್ಯಾರ್ಥಿಯ ಹೆಸರು ನಾಡಿನ ಜನರಿಗೆ ಗೊತ್ತಿಲ್ಲ ಆದರೆ ವ್ಯಕ್ತಿ ಮಾತ್ರ ಎಲ್ಲರಿಗೂ ಗೊತ್ತು. ಯಾಕೆಂದರೆ ಹುಬ್ಬಳ್ಳಿ ಗಲಭೆಗೆ ಕಾರಣನಾದವನೇ 18 ವರ್ಷ ವಯಸ್ಸಿನ ಈ ಪೋರ. ವಿಡಿಯೋನನಲ್ಲಿ ಅವನ ಒಂದು ಝಲಕ್ ಕಾಣುತ್ತದೆ. ಅಸಲಿಗೆ ವಿಷಯವೇನೆಂದರೆ ಇವನು ದ್ವಿತೀಯ ಪಿಯು (2nd PU) ವಿದ್ಯಾರ್ಥಿಯಾಗಿದ್ದಾನೆ ಮತ್ತು ನಿಮಗೆ ಗೊತ್ತಿರುವ ಹಾಗೆ ಸೆಕೆಂಡ್ ಪಿಯು ಪರೀಕ್ಷೆಗಳು ಇಂದಿನಿಂದ (ಶುಕ್ರವಾರ) ಅರಂಭಗೊಂಡಿವೆ. ಇವನಿಗೂ ಇಂದು ಬಿಜಿನೆಸ್ ಸ್ಟಡೀಸ್ (Business Studies) ಪರೀಕ್ಷೆ ಇತ್ತು. ಇವನು ವಾಟ್ಸ್ಯಾಪ್ ನಲ್ಲಿ ಪೋಸ್ಟ್ (WhatsApp Post) ಹಾಕಿದ ದಿನವೇ ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದರು. ಆ ಒಂದು ಪೋಸ್ಟ್ ರಾಜ್ಯದಲ್ಲಿ ಯಾವ ಮಟ್ಟಿಗೆ ತಲ್ಲಣ ಸೃಷ್ಟಿಸಿತು ಅನ್ನೋದನ್ನು ನಾವೆಲ್ಲ ಕಣ್ಣಾರೆ ಕಂಡಿದ್ದೀವಿ. ಇವನಿನ್ನೂ 17-18 ರ ಪ್ರಾಯದವನಾಗಿರುವುದರಿಂದ ತನ್ನ ಸ್ವಂತ ಬುದ್ಧಿಯಿಂದ ಈ ಚೇಷ್ಟೆ ಮಾಡಿರಲಾರ.

ಆದರೆ ತಪ್ಪು ನಡೆದುಹೋಗಿದೆ. ಜೈಲಿನಲ್ಲಿದ್ದುಕೊಂಡು ಓದಿ ಪರೀಕ್ಷೆ ಬರೆಯಲು ತಯಾರಾಗುವ ಸ್ಥಿತಿ ಇವನಿಗೆ ಎದುರಾಗಿದೆ. ಪೊಲೀಸ ವ್ಯಾನಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದು ಪುನಃ ಜೈಲಿಗೆ ವಾಪಸ್ಸು ಹೋಗುತ್ತಿದ್ದಾನೆ. ಯಾವುದೇ ವಿದ್ಯಾರ್ಥಿ ಮತ್ತು ಪಾಲಕರು ಇಂಥ ಸ್ಥಿತಿಯ ಬಗ್ಗೆ ಯೋಚನೆಯನ್ನೂ ಮಾಡಲಾರರು. ಜೈಲು ಅಥವಾ ಜುವೆನೈಲ್ ಕೇಂದ್ರಗಳ ಅಧಿಕಾರಿಗಳು ಇವನಿಗೆ ಓದಲು ಒಂದು ವ್ಯವಸ್ಥೆಯನ್ನು ಖಂಡಿತ ಮಾಡಿಕೊಡುತ್ತಾರೆ. ಆದರೆ ಓದಲು ಇವನಿಗೆ  ಪೂರಕ ವಾತಾವರಣ ಖಂಡಿತ ಅಲ್ಲಿ ಸಿಕ್ಕಲಾರದು.

ಈಗಷ್ಟೇ ಪಿಯು ಓದುತ್ತಿರುವ ವಿದ್ಯಾರ್ಥಿಗೆ ಇದೆಲ್ಲ ಯಾಕೆ ಬೇಕಿತ್ತು ಅನ್ನುವ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಹುಟ್ಟುತ್ತದೆ. ಇವನು ಜೈಲಿನಿಂದ ಹೊರಬಂದ ನಂತರವೂ ಅಲ್ಲಿಗೆ ಹೋಗುವಂತಾಗಲು ಉಂಟಾದ ಸ್ಥಿತಿ, ಮನೆ, ತಂದೆತಾಯಿಗಳಿಂದ ದೂರವಾಗಿ ಕ್ರಿಮಿನಲ್ ಜೊತೆ ದಿನ ಕಳೆಯಬೇಕಾಗಿ ಬಂದ ಅನಿವಾರ್ಯತೆ ಬದುಕಿನುದ್ದಕ್ಕೂ ಕಾಡಲಿವೆ.

ಇದನ್ನೂ ಓದಿ:   ಹಳೇ ಹುಬ್ಬಳ್ಳಿ ಗಲಾಟೆ ಪ್ರಕರಣ: ಠಾಣೆಗೆ ಭೇಟಿ ನೀಡಿ ಚರ್ಚೆ ನಡೆಸಿದ ಪ್ರಮೋದ್ ಮುತಾಲಿಕ್, ದಿಡ್ಡಿ ಆಂಜನೇಯ ದೇಗುಲದಲ್ಲಿ ವಿಶೇಷ ಪೂಜೆ